ಪುತ್ತೂರು: ಜಮೀಯತ್ತುಲ್ ಫಲಾಹ್ ಪುತ್ತೂರು ಘಟಕದ ವಾರ್ಷಿಕ ಮಹಾಸಭೆ ಪುತ್ತೂರು ಕೆ.ಪಿ.ಕಾಂಪ್ಲೆಕ್ಸ್ನಲ್ಲಿರುವ ಘಟಕದ ಕಛೇರಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಜಮೀಯ್ಯತ್ತುಲ್ ಫಲಾಹ್ ಘಟಕದ ಅಧ್ಯಕ್ಷ ಫಝಲ್ ರಹೀಂ ವಹಿಸಿದ್ದರು. ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಯುನಿಕ್, ಖಜಾಂಜಿಯಾಗಿ ನ್ಯಾಯವಾದಿ ಕೆ.ಎಂ.ಸಿದ್ದೀಕ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಬಿ.ಎ.ಶಕೂರ್ ಹಾಜಿ ಕಲ್ಲೇಗ, ಪಿ.ಬಿ.ಹಸೈನಾರ್ ದರ್ಬೆ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ದರ್ಬೆ, ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಗೋಳಿಕಟ್ಟೆ, ಜತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ಮುಕ್ರಂಪಾಡಿರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಲ್ಟಿ ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ ರಹಿಮಾನ್ ಅಝಾದ್, ಶೇಖ್ ಜೈನುದ್ದೀನ್, ಅಬೂಬಕ್ಕರ್ ಮುಲಾರ್, ಅಶ್ರ- ಕಲ್ಲೇಗ, ಫಝಲ್ ರಹೀಂ, ಅಶ್ರಫ್ ಕೊಟ್ಯಾಡಿ, ಯೂಸುಫ್, ಇಬ್ರಾಹಿಂ ಸಾಗರ್, ಅಬ್ದುಲ್ ಅಝೀಝ್ ಎಮ್ಎಮ್., ಉಮ್ಮರ್ ಕರಾವಳಿರವರನ್ನು ಆಯ್ಕೆ ಮಾಡಲಾಯಿತು. ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯತ್ತುಲ್ ಫಲಾಹ್ ಘಟಕದ ಅದ್ಯಕ್ಷ ಶಫೀ ಅಹಮ್ಮದ್ ಖಾಝಿ ಮತ್ತು ಮಂಗಳೂರು ನಗರ ಜಮೀಯತ್ತುಲ್ ಫಲಾಹ್ ಘಟಕದ ಪದಾಧಿಕಾರಿ ಪಿಬಿ ರಝಾಕ್, ಸುಳ್ಯ ಜಮೀಯತ್ತುಲ್ ಫಲಾಹ್ ಘಟಕದ ಕೋಶಾಧಿಕಾರಿ ಅಬ್ಬಾಸ್ ಸುಳ್ಯ, ಮೆನೇಜರ್ ಆದಂ ಚುನಾವಣಾ ವೀಕ್ಷಕರಾಗಿದ್ದರು.
Home ಇತ್ತೀಚಿನ ಸುದ್ದಿಗಳು ಜಮೀಯ್ಯತ್ತುಲ್ ಫಲಾಹ್ ಪುತ್ತೂರು ಘಟಕದ ಮಹಾಸಭೆ ; ಅಧ್ಯಕ್ಷ:ರಶೀದ್ ಹಾಜಿ ಪರ್ಲಡ್ಕ, ಪ್ರ.ಕಾರ್ಯದರ್ಶಿ: ಅಬ್ದುಲ್ ರಹಿಮಾನ್,...