ದರ್ಬೆ ಲಿಟ್ಲ್ ಫ್ಲವರ್ ಶಾಲಾ ಪ್ರಾರಂಭೋತ್ಸವ

0

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಮೇ.31ರಂದು ನಡೆಯಿತು.
ಶಾಲಾ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದ ಮೂಲಕ ವಿದ್ಯಾರ್ಥಿಗಳನ್ನು ಹಾಗೂ ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿ, ಕರೆತರಲಾಯಿತು. ನೂತನ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ತಿನ್ನಿಸಿ ಸ್ವಾಗತಿಸಲಾಯಿತು.

ಶಾಲಾ ಪ್ರಾರಂಭೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂತ ಫಿಲೋಮಿನಾ ಪದವಿ ಕಾಲೇಜಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಸೂರ್ಯನಂತೆ ಪ್ರಕಾಶಮಾನವಾಗಲು ಸಾಧ್ಯವಿಲ್ಲದಿದ್ದರೂ ಮೇನದ‌ ಬತ್ತಿಯಂತೆ ಬೆಳಕು ನೀಡುವಂತಾಗಬೇಕು. ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿದ್ದು ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಅದ್ಬುತ ಪ್ರತಿಭೆಗಳಾಗಿ ಹೊರಹೊಮ್ಮಲು ಸಹಕಾರ ನೀಡಬೇಕು. ಶಿಸ್ತು, ಗುಣಮಟ್ಟದ ಶಿಕ್ಷಣದ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಲಿಟ್ಲ್‌ ಫ್ಲವರ್ ಮಾದರಿ ಶಾಲೆಯಾಗಿದೆ. ನೂರು ವರ್ಷದ ಸಂಭ್ರಮದಲ್ಲಿರುವ ಶಾಲೆಯಲ್ಲಿ ನೂರು ಕಾರ್ಯಕ್ರಮ ನಡೆಯಲಿ.ಇದರಲ್ಲಿ ನಾವೆಲ್ಲ ಭಾಗವಹಿಸಿಲಿದ್ದೇವೆ ಎಂದರು.

ನಗರ ಕ್ಲಷ್ಟರ್ ನ ಸಂಪನ್ಮೂಲ ವ್ಯಕ್ತಿ ಶಶಿಕಲಾ ಮಾತನಾಡಿ, ಶಾಲಾ ಪ್ರಾರಂಭೋತ್ಸವ ಮೂಲಕ ಶಾಲೆಗೆ ಕಲೆ‌ಬಂದಿದೆ. ವಿನೂತನ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ ವರ್ಷ ಮೂಡಿಬರಲಿ. ಎಲ್ಲಾ ಶಾಲೆಗಳಿಗೂ ಶೆ.100 ಪಠ್ಯ ಪುಸ್ತಕ ವಿತರಿಸಲಾಗಿದೆ. ವಿನಾ ಕಾರಣ‌ಮಕ್ಕಳನ್ನು ಗೈರು ಹಾಜರಾಗದಂತೆ ನೋಡಿಕೊಳ್ಳುವಂತೆ ಪೋಷಕರಲ್ಲಿ‌ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಪ್ರಶಾಂತಿ‌ ಬಿ.ಎಸ್ ಮಾತನಾಡಿ, ಶಾಲೆಯಲ್ಲಿ ಅನುಭವಿ ಶಿಕ್ಷಕರಿಂದ ಪಾಠದ‌ ಜೊತೆಗೆ ಪಠ್ಯ ತರ ಚಟುವಟಿಕೆ, ಹಬ್ಬಗಳ ಆಚರಣೆ ಹಾಗೂ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಪ್ರತಿಭೆಗಳಿಗೆ ಪ್ರದರ್ಶನಕ್ಕೆ ವೇದಿಕೆ ಒದಗಿಸಲಾಗುವುದು ಎಂದರು.


ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ ಹಾಗೂ ಸುರಕ್ಷ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ ಶುಭಹಾರೈಸಿದರು.
ಹಿರಿಯ ವಿದ್ಯಾರ್ಥಿ ಸಂತೋಷ ದಲ್ಮೆಡಾ ,‌ಸುನಿತಾ, ಹಿರಿಯ ವಿದ್ಯಾರ್ಥಿ, ಕೋಸ್ಟಲ್ ಹೋಂನ ಮ್ಹಾಲಕ ಸಂದೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಶಾಲಾ‌ ಕೊಡುಗೈ ದಾನಿಯಾಗಿರುವ ಹಿರಿಯ ವಿದ್ಯಾರ್ಥಿ ಸಂತೋಷ್ ದಲ್ಮೆಡಾ ಹಾಗೂ ಸುನೀತಾ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಿದರು. ಮಕ್ಕಳಿಗೆ ಸಾಂಕೇತಿಕವಾಗಿ ಪಠ್ಯ ಪುಸ್ತಕ ವಿತರಿಸಿದರು.

ಶಾಲಾ ಮುಖ್ಯ ಶಿಕ್ಷಕಿ ವೆನಿಶಾ ಬಿ.ಎಸ್ ಸ್ವಾಗತಿಸಿದರು. ಶಿಕ್ಷಕರಾದ ವಿಲ್ಮಾ, ವಿನಿತಾ, ಜಾಸ್ಲಿನ್, ವೀಣಾ,ಮಮತಾ ನಳಿನಾಕ್ಷಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here