ಬಿಜೆಪಿ ಸರಕಾರ ಇರುವಾಗಲೇ, ಪುತ್ತೂರಿಗೆ ಮೆಡಿಕಲ್ ಕಾಲೇಜು ಮತ್ತು ಅದಕ್ಕೆ ಪೂರಕವಾಗಿ ಆಸ್ಪತ್ರೆಯನ್ನು 300 ಬೆಡ್ಗೆ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಡಾ.ಸುಧಾಕರ್ ಅವರಿಗೂ ಮನವಿ ನೀಡಲಾಗಿತ್ತು. ಆಗ ಮೆಡಿಕಲ್ ಕಾಲೇಜು ಆಗಬೇಕಾದರೆ ಪ್ರಥಮವಾಗಿ 300 ಬೆಡ್ನ ಆಸ್ಪತ್ರೆಗೆ ಅಗತ್ಯವಿತ್ತು. ಈ ನಿಟ್ಟಿನಲ್ಲಿ 300 ಬೆಡ್ನ ಆಸ್ಪತ್ರೆಗೆ ಮೊದಲ ಆದ್ಯತೆ ನೀಡಿ ಅದಕ್ಕೆ ಬೇಕಾಗುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಕುರಿತು ಆಸ್ಪತ್ರೆಗೆ ಅಗತ್ಯವಿರುವ ಸುತ್ತಮುತ್ತಲಿನ ಜಾಗವನ್ನು ಸರಕಾರಿ ಆಸ್ಪತ್ರೆಯ ಹೆಸರಿಗೆ ಆರ್ಟಿಸಿ ಕೂಡಾ ಮಾಡಲಾಗಿತ್ತು. ಜಿಲ್ಲೆಯಿಂದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದಾರೆ. ಹಾಗಾಗಿ ಮೆಡಿಕಲ್ ಕಾಲೇಜಿಗಿಂತ ಮೊದಲು ಇಲ್ಲಿ ಆಸ್ಪತ್ರೆಯನ್ನು 3೦೦ ಬೆಡ್ಗೆ ಏರಿಸುವ ಪ್ರಯತ್ನ ಆಗಬೇಕಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ‘ಬಿಜೆಪಿ ಸರಕಾರ ಇರುವಾಗಲೇ ಮೆಡಿಕಲ್ ಕಾಲೇಜಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’-ಮಾಜಿ ಶಾಸಕ ಮಠಂದೂರು