





ಪುತ್ತೂರು: ಪಂಜೊಟ್ಟು ತರವಾಡು ಟ್ರಸ್ಟ್ನಿಂದ ಪತ್ತನಾಜೆ ತಂಬಿಲ ನಡೆಯಿತು. ವಸಂತ ಮಡಿವಾಳರವರು ತಂಬಿಲದ ವಿಧಿವಿಧಾನವನ್ನು ನಡೆಸಿಕೊಟ್ಟರು. ಪಂಜೊಟ್ಟು ತರವಾಡು ಟ್ರಸ್ಟ್ನ ಸಂಚಾಲಕ ನುಳಿಯಾಲು ಜಗನ್ನಾಥ ರೈ, ತರವಾಡು ಮನೆಯ ಯಜಮಾನ ವಿಶ್ವನಾಥ ರೈ ಮಾದೋಡಿ, ಟ್ರಸ್ಟ್ನ ಅಧ್ಯಕ್ಷ ಸೇರ್ತಾಜೆ ಹೊಸಮನೆ ಸುಧಾಕರ ರೈ, ಖಜಾಂಜಿ ರಮೇಶ್ ರೈ ಪಂಜೊಟ್ಟು, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷ ಅಮ್ಮು ರೈ ಮತ್ತು ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.





            






