ಉಪ್ಪಿನಂಗಡಿ: ವರುಣನ ಕೃಪೆಗಾಗಿ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಸೀಯಾಳಾಭಿಷೇಕದೊಂದಿಗೆ ವಿಶೇಷ ಪ್ರಾರ್ಥನೆ ಜೂ.5ರಂದು ನೆರವೇರಿತು. ಇದಕ್ಕೂ ಮೊದಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಸಂಕಲ್ಪ ಪ್ರಾರ್ಥನೆ ನಡೆಯಿತು.
ಮಳೆಗಾಗಿ ಪ್ರಾರ್ಥಿಸಿ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕ ನಡೆಯಿತು. ಈ ಸಂದರ್ಭ ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಹರಿರಾಮಚಂದ್ರ, ಸುನೀಲ್ ಎ., ಜಯಂತ ಪೊರೋಳಿ, ಶ್ರೀಮತಿ ಹರಿಣಿ ಕೆ., ಶ್ರೀಮತಿ ಪ್ರೇಮಲತಾ, ರಾಮ ನಾಯ್ಕ, ಮಾಜಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಸದಸ್ಯ ಕೃಷ್ಣರಾವ್ ಆರ್ತಿಲ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯೆ ವಿದ್ಯಾಲಕ್ಷ್ಮಿ ಪ್ರಭು, ಪ್ರಮುಖರಾದ ನಾಗೇಶ್ ನಾಯಕ್, ಕೈಲಾರು ರಾಜಗೋಪಾಲ ಭಟ್, ಯೊಗೀಶ್ ಸಾಮಾನಿ ಸಂಪಿಗೆದಡಿ, ಜಯಪ್ರಕಾಶ್, ಕೃಷ್ಣಪ್ರಸಾದ್ ಬೊಳ್ಳಾವು, ಪ್ರಸನ್ನ ಶೆಟ್ಟಿ, ರಾಕೇಶ್ ರೈ, ಯು.ರಾಮ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈಯವರನ್ನು ದೇವಾಲಯದ ವತಿಯಿಂದ ಗೌರವಿಸಲಾಯಿತು. ಬಳಿಕ ಶಾಸಕರು ದೇವಾಲಯದ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ವ್ಯವಸ್ಥಾಪನಾ ಸಮಿತಿಯವರಲ್ಲಿ ಚರ್ಚೆ ನಡೆಸಿದರು.