ಪುತ್ತೂರು: ಪಡೀಲು ಚೈತನ್ಯ ಮಿತ್ರ ವ್ರಂದದ ಕಟ್ಟಡದಲ್ಲಿ, ವಾಗ್ದೇವಿ ಸಂಗೀತ ಶಾಲೆಯ ತರಗತಿ ಶುಭಾರಂಭಗೊಂಡಿತು. ಪಡೀಲು ಶ್ರೀಮಾತಾ ಸೇವಾ ಸಮಿತಿ ಹಿರಿಯ ಸದಸ್ಯೆ ಪ್ರೇಮಲತಾ ರಂಜನ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಚೈತನ್ಯ ಮಿತ್ರ ವ್ರಂದದ ಅಧ್ಯಕ್ಷ ಪುರಂದರ್ ಪಡೀಲ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಸಂಪತ್ ಕುಮಾರ್ ಜೈನ್ ಸಂಗೀತದ ಮಹತ್ವದ ಬಗ್ಗೆ ವಿವರಿಸಿದರು. ಸಂಗೀತ ಶಾಲಾ ಗುರು ವಿದೂಷಿ ಸವಿತಾ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ಶಾಲಾ ವಿದ್ಯಾರ್ಥಿಗಳಾದ ರಶ್ಮಿ, ಶಿವಾನಿ ಹಾಗೂ ಸಮರ್ಥ್ ಪ್ರಾರ್ಥಿಸಿದರು.
ಮಿತ್ರವ್ರಂದದ ಜತೆ ಕಾರ್ಯದರ್ಶಿ ರವೀಂದ್ರ ಪೈ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಬಿ ವಂದಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ್ ಕೇಪುಳು ಕಾರ್ಯಕ್ರಮ ನಿರೂಪಿಸಿದರು. ಸದಸ್ಯರುಗಳಾದ ಗಣೇಶ್ ಎನ್, ಗೋಪಾಲಕೃಷ್ಣ ಎಮ್. ಈಶ, ಭವಾನಿ ಶಂಕರ್, ಅರುಣ್ ಕುಮಾರ್, ಅಶೋಕ್ ಟಿ., ಸುನಂದ ಶಂಕರ್, ಸಹಕರಿಸಿದರು. ಶ್ರೀಮಾತಾ ಸೇವಾ ಸಮಿತಿಯ ಸದಸ್ಯರು, ಸಂಗೀತ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.