ಪುತ್ತೂರು: ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿರುವ ಅರಫಾ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ ಆಚರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿಯ ವಿಚಾರವಾಗಿ ಸಂವಾದ ನಡೆಸಲಾಯಿತು. ಪರಿಸರಕ್ಕೆ ಪೂರಕವಾದ ಗಿಡಗಳನ್ನು ಶಾಲೆಯ ಆವರಣದಲ್ಲಿ ಅಧ್ಯಾಪಕರ ಸಹಕಾರದೊಂದಿಗೆ ಮಕ್ಕಳು ನೆಟ್ಟು ಸಂಭ್ರಮಿಸಿದರು.
ಪರಿಸರದಲ್ಲಿ ಗಿಡಗಳನ್ನು ನೆಡುವುದು ಮಾತ್ರವಲ್ಲ ನೆಟ್ಟ ಗಿಡಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಮನೆಯ ಸದಸ್ಯನಂತೆ ನೀರೆರೆದು ಪೋಷಿಸಬೇಕೆನ್ನುವ ಪ್ರತಿಜ್ಜೆಯನ್ನು ಸ್ವೀಕರಿಸಲಾಯಿತು. ಪರಿಸರ ಅತ್ಯಂತ ಅಪಾಯಕಾರಿಯಾಗಿ ಮಾರ್ಪಡಾಗುತ್ತಿರುವ ಪ್ರಸಕ್ತ ಸನ್ನಿವೇಷದಲ್ಲಿ ಗಿಡಗಳು ಮತ್ತು ಪರಿಸರದ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಕಾರ್ಯಗಾರವೂ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ.ಪಿ.ಎ ಸಿದ್ದೀಕ್, ಮುಖ್ಯಶಿಕ್ಷಕಿಯಾದ ಕವಿತಾ ನವೀನ್ ಕುಲಾಲ್, ಅಧ್ಯಾಪಕ ವೃಂದ ಮತ್ತು ಸಿಬ್ಬಂದಿಗಳು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.