





ಪುತ್ತೂರು: ಆರೋಗ್ಯ ಇಲಾಖೆಯ ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒತ್ತಡ ಹೇರುತ್ತಿರುವುದರ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ದ.ಕ.ಜಿಲ್ಲೆ ಇದರ ವತಿಯಿಂದ ಜೂ.9ರಂದು ದ.ಕ.ಜಿಲ್ಲಾ ಪಂಚಾಯತ್ನ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ ತಿಳಿಸಿದ್ದಾರೆ. ನಮ್ಮ ಇಲಾಖೆಯ ಕರ್ತವ್ಯವಾದ 0-6 ವರ್ಷದ ಮಕ್ಕಳ ತೂಕ, ಎತ್ತರ, ಗರ್ಭಿಣಿ ಬಾಣಂತಿಯರ ದಾಖಲೆ, ಪೂರಕ ಆಹಾರ ವಿತರಣೆ, ಶಾಲಾ ಪೂರ್ವ ಶಿಕ್ಷಣ, ಮಾತೃವಂದನಾ, ಭಾಗ್ಯಲಕ್ಷ್ಮಿ ದಾಖಲಾತಿ ನಿರ್ವಹಣೆ, ಅಲ್ಲದೆ ಚುನಾವಣಾ ಆಯೋಗದ ಬಿಎಚ್ಒ ಕರ್ತವ್ಯ ಇತ್ಯಾದಿ ಕೆಲಸಗಳ ಮಧ್ಯೆಯೇ ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆಯನ್ನು ಮಾಡಲು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಆದುದರಿಂದ ಈ ಪ್ರತಿಭಟನೆಯಲ್ಲಿ ಪುತ್ತೂರು, ಕಡಬ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಾಂದರ್ಭಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.











