ಕಡಬ ಪಟ್ಟಣ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ಮುಕ್ತಾಯ: ಶೇ. 79.83 ಮತದಾನ

0

ಆ.20ರಂದು ಮತ ಎಣಿಕೆ

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ 13 ವಾರ್ಡ್ಗಳಲ್ಲಿ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 79.83 ಮತದಾನವಾಗಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ವಾರ್ಡ್ ವಾರು ಶೇ. ಮತದಾನ
ಕಳಾರ ಶೇ.77.12 ಕೋಡಿಬೈಲು ಶೇ.76.67 , ಪನ್ಯ ಶೇ.78.26 , ಬೆದ್ರಾಜೆ ಶೇ.85.02, ಮಾಲೇಶ್ವರ ಶೇ. 80.69, ಕಡಬ ಶೇ.73.59 ,ಪಣೆಮಜಲು ಶೇ.77.00 , ಪಿಜಕಳ ಶೇ.81.75, ಮೂರಾಜೆ ಶೇ.82.59, ದೊಡ್ಡಕೊಪ್ಪ ಶೇ.82.60 , ಕೋಡಿಂಬಾಳ ಶೇ.82.83, ಮಜ್ಕಾರು ಶೇ.81.13, ಪುಳಿಕುಕ್ಕು ಶೇ.79.26 ಮತದಾನವಾಗಿದೆ.


ಆ.20ರಂದು ಮತ ಎಣಿಕೆ:
ಆ.20ರಂದು ಮತ ಎಣಿಕೆಯು ಕಡಬ ಆಡಳಿತ ಸೌಧದಲ್ಲಿ ನಡೆಯಲಿದೆ. ಮತಪೆಟ್ಟಿಗೆಗಳನ್ನು ತಾಲೂಕು ಆಡಳಿತ ಸೌಧದ ಸ್ಟ್ರಾಂಗ್ ರೂಮ್‌ನಲ್ಲಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳ ವಿವರ:
ವಾರ್ಡ್ 1-ಕಳಾರ:
ಹಿಂದುಳಿದ ವರ್ಗ ಎ’ ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತಮನ್ನಾ ಜಬೀನ್, ಬಿಜೆಪಿಯಿಂದ ಪ್ರೇಮಾ, ಎಸ್‌ಡಿಪಿಐನಿಂದ ಸಮೀರಾ ಹಾರಿಸ್, ಪಕ್ಷೇತರರಾಗಿ ಜೈನಾಬಿ. ಸ್ಪರ್ಧಿಸಿದ್ದಾರೆ.

ವಾರ್ಡ್ 2-ಕೋಡಿಬೈಲು: ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾದ ಕೋಡಿಬೈಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮೋಹಿನಿ, ಬಿಜೆಪಿಯಿಂದ ಕುಸುಮ ಅಂಗಡಿಮನೆ ಸ್ಪರ್ಧಿಸಿದ್ದಾರೆ.

ವಾರ್ಡ್ 3-ಪನ್ಯ: ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಪನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಹಮ್ಮದ್ ಪೈಝಲ್, ಬಿಜೆಪಿಯಿಂದ ಆದಂ ಕುಂಡೋಳಿ, ಎಸ್‌ಡಿಪಿಐನಿಂದ ಹಾರಿಸ್ ಕಳಾರ, ಮುಸ್ಲಿಂ ಲೀಗ್‌ನಿಂದ ಕೆ. ಅಬ್ದುಲ್ ರಝಾಕ್ ಸ್ಪರ್ಧಿಸಿದ್ದಾರೆ.

ವಾರ್ಡ್ 4-ಬೆದ್ರಾಜೆ: ಸಾಮಾನ್ಯ ಮೀಸಲು ಬೆದ್ರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೈಮನ್ ಸಿ.ಜೆ, ಬಿಜೆಪಿಯಿಂದ ಅಶೋಕ್ ಕುಮಾರ್ ಪಿ. ಸ್ಪರ್ಧಿಸಿದ್ದಾರೆ.

ವಾರ್ಡ್ 5-ಮಾಲೇಶ್ವರ: ಹಿಂದುಳಿದ ವರ್ಗಎ’ಗೆ ಮೀಸಲಾದ ಮಾಲೇಶ್ವರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಕಾಶ್ ಎನ್.ಕೆ., ಕಾಂಗ್ರೆಸ್‌ನಿಂದ ಹನೀಫ್ ಕೆ.ಎಂ. ಸ್ಪರ್ಧಿಸಿದ್ದಾರೆ.


ವಾರ್ಡ್ 6-ಕಡಬ: ಸಾಮಾನ್ಯ ಮಹಿಳೆಗೆ ಮೀಸಲಾದ ಕಡಬ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ನೀಲಾವತಿ ಶಿವರಾಮ್, ಬಿಜೆಪಿಯಿಂದ ಪ್ರೇಮಾ, ಪಕ್ಷೇತರರಾಗಿ ಆಲೀಸ್ ಚಾಕೊ, ಎಸ್‌ಡಿಪಿಐನಿಂದ ಸ್ವಾಲಿಯತ್ ಜಸೀರಾ ಸ್ಪರ್ಧಿಸಿದ್ದಾರೆ.


ವಾರ್ಡ್ 7-ಪಣೆಮಜಲು: ಹಿಂದುಳಿದ ವರ್ಗ ಬಿ’ಗೆ ಮೀಸಲಾದ ಪಣೆಮಜಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಗಣೇಶ್ ಗೌಡ, ಕಾಂಗ್ರೆಸ್‌ನಿಂದ ರೋಹಿತ್ ಗೌಡ ಸ್ಪರ್ಧಿಸಿದ್ದಾರೆ.

ವಾರ್ಡ್ 8-ಪಿಜಕ್ಕಳ: ಸಾಮಾನ್ಯ ಮೀಸಲು ಪಿಜಕ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಶ್ರ ಶೇಡಿಗುಂಡಿ, ಬಿಜೆಪಿಯಿಂದ ದಯಾನಂದ ಗೌಡ ಪಿ. ಸ್ಪರ್ಧಿಸಿದ್ದಾರೆ.

ವಾರ್ಡ್ 9-ಮೂರಾಜೆ: ಹಿಂದುಳಿದ ವರ್ಗಎ’ಗೆ ಮೀಸಲಾದ ಮೂರಾಜೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ, ಕಾಂಗ್ರೆಸ್‌ನಿಂದ ಕೃಷ್ಣಪ್ಪ ಪೂಜಾರಿ ಸ್ಪರ್ಧಿಸುತ್ತಿದ್ದು, ಈ ವಾರ್ಡ್ಗೆ ಕಡಬ ಸ.ಪ.ಪೂರ್ವ ಕಾಲೇಜು(ಎಡಭಾಗ) ಮತಗಟ್ಟೆಯಾಗಿದ್ದು ಇಲ್ಲಿ 287 ಪುರುಷ, 320 ಮಹಿಳಾ ಮತದಾರರಿದ್ದಾರೆ.


ವಾರ್ಡ್ 10-ದೊಡ್ಡಕೊಪ್ಪ: ಸಾಮಾನ್ಯ ಮಹಿಳೆಗೆ ಮಿಸಲಾದ ದೊಡ್ಡಕೊಪ್ಪ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುಣವತಿರಘುರಾಮ, ಕಾಂಗ್ರೆಸ್‌ನಿಂದ ತುಳಸಿ ಸ್ಪರ್ಧಿಸಿದ್ದಾರೆ.


ವಾರ್ಡ್ 11-ಕೋಡಿಂಬಾಳ: ಸಾಮಾನ್ಯ ಮಹಿಳೆಗೆ ಮೀಸಲಾದ ಕೋಡಿಂಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜ್ಯೋತಿ ಡಿ.ಕೋಲ್ಪೆ, ಬಿಜೆಪಿಯಿಂದ ಅಕ್ಷತಾ ಬಾಲಕೃಷ್ಣ ಗೌಡ ಸ್ಪರ್ಧಿಸಿದ್ದಾರೆ.


ವಾರ್ಡ್ 12-ಮಜ್ಜಾರು: ಪರಿಶಿಷ್ಠ ಜಾತಿ ಅಭ್ಯರ್ಥಿಗೆ ಮೀಸಲಾದ ಮಜ್ಜಾರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮೋಹನ, ಕಾಂಗ್ರೆಸ್‌ನಿಂದ ಉಮೇಶ್ ಮಡ್ಯಡ್ಕ ಸ್ಪರ್ಧಿಸಿದ್ದಾರೆ.


ವಾರ್ಡ್ 13-ಪುಳಿಕುಕ್ಕು: ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಪುಳಿಕುಕ್ಕು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೃಷ್ಣ ನಾಯ್ಕ, ಬಿಜೆಪಿಯಿಂದ ಸದಾನಂದ ನಾಯ್ಕ ಅವರು ಸ್ಪರ್ಧಿಸಿದ್ದಾರೆ.


LEAVE A REPLY

Please enter your comment!
Please enter your name here