ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪುತ್ತೂರು: ಮನುಷ್ಯನು ಪರಿಸರದೊಂದಿಗೆ, ಪರಿಸರವನ್ನವಲಂಬಿಸಿ ಅದರ ನೆರಳಿನಲ್ಲಿಯೇ ತನ್ನ ಬಾಳನ್ನು ಸಾಗಿಸಬೇಕಾದ ಅನಿವಾರ್ಯತೆಯನ್ನು ಮಾತ್ರವಲ್ಲದೆ, ಇತ್ತೀಚೆಗೆ ಮಾನವನ ಅನೈಸರ್ಗಿಕ ಕಾರ್ಯಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿ ಹಾಗೂ ಅದರಿಂದ ಮುಂದೆ ಜಗತ್ತಿಗೆ ಆಗಬಹುದಾದ ಗಂಡಾಂತರಗಳು ಮತ್ತು ಅವುಗಳನ್ನು ಪರಿಹರಿಸುವಲ್ಲಿ ನಮ್ಮ ಪಾತ್ರವೇನು ಎಂಬುವುದನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಲ್ಲಿ ಶಿಕ್ಷಕರ ಮತ್ತು ಶಾಲೆಯ ಪಾತ್ರ ಬಹು ಮಹತ್ತರದ್ದಾಗಿರುತ್ತದೆ.

ಇದೇ ಜೂನ್ 5ರಂದು, ನೆಹರು ನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಶಾಲಾ ಪ್ರಾಂಶುಪಾಲರ ಮಾರ್ಗದರ್ಶನದೊಂದಿಗೆ, ಶಾಲಾ ಗೈಡ್ ಕ್ಯಾಪ್ಟನ್ (ALT-G) ಶ್ರೀಮತಿ ಪ್ರಫುಲ್ಲ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನೊಡಗೂಡಿಸಿಕೊಂಡು ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡುವುದರ ಮೂಲಕ, ವಿಶ್ವಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಯಿತು.

LEAVE A REPLY

Please enter your comment!
Please enter your name here