ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ನೂತನ ಸಂಸತ್ ಮಂತ್ರಿಮಂಡಲವನ್ನು ರಚನೆ ಮಾಡಲಾಯಿತು.
ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಸಂಜಯ್ ಪಿ, ಉಪಮುಖ್ಯಮಂತ್ರಿಯಾಗಿ ದಿವಿಶ್, ನೀರಾವರಿ ಮಂತ್ರಿಯಾಗಿ ದಿವಾಕರ ಮತ್ತು ತನುಷ್, ವಿದ್ಯಾಮಂತ್ರಿಯಾಗಿ ಸಾಕ್ಷಿ ಮತ್ತು ಫಾತಿಮತ್ ರಿಝಾ, ಆರೋಗ್ಯ ಮಂತ್ರಿಯಾಗಿ ದೀವಿಕಾ ಮತ್ತು ವರ್ಷಿತ್, ಸಾಂಸ್ಕೃತಿಕ ಮಂತ್ರಿಯಾಗಿ ತನ್ವಿ ಮತ್ತು ಯಶ್ವಿತ್, ವಾರ್ತಮಂತ್ರಿಯಾಗಿ ಫಾತಿಮತ್ ಫಿದಾ, ಪ್ರಣಮ್, ಕೃಷಿಮಂತ್ರಿಯಾಘಿ ತನುಷ್ ಕೆ, ಪ್ರಜೀತ್, ಮಿಥುನ್, ಕ್ರೀಡಾಮಂತ್ರಿಯಾಗಿ ಫಾತಿಮತ್ ಶೈಮಾ, ಜಿತೇಶ್, ಆಹಾರ ಮಂತ್ರಿಯಾಗಿ ನಮೃತ್ ಮತ್ತು ನಯನಾ, ಸ್ವಚ್ಛತಾ ಮಂತ್ರಿಯಾಗಿ ಮನವಿ, ಗ್ರೀಷ್ಮಾ, ರಕ್ಷಣಾ ಮಂತ್ರಿಯಾಗಿ ಪುನೀತ್, ಕೌಶಿಕ್, ಮೋಹಿತ್, ಜೀವಿತ್, ವಿರೋಧ ಪಕ್ಷದ ನಾಯಕನಾಗಿ ಕಿಶನ್‌ರವರು ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಮುಖ್ಯಶಿಕ್ಷಕಿ ನೀಲಾವತಿ ಕೆಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ರಾಜೀವಿ ಬಿ.ಕೆಯವರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕ ವೃಂದದವರ ಸಹಕಾರದೊಂದಿಗೆ ನಡೆಸಲಾಯಿತು.