ಪುತ್ತೂರು: ಅನ್ನ, ಅಕ್ಷರ, ಆರೋಗ್ಯ ಸಾಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವಂತೆ ಮಾಡುವುದು ಸರಕಾರ ಜವಾಬ್ದಾರಿ. ಸರಕಾರದೊಂದಿಗೆ ಸಂಸ್ಥೆಯೊಂದು ಕೈ ಜೋಡಿಸಿದರೆ ಏನಾಗಬಹುದು ಎಂಬುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಜೂ.9 ರಂದು, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಮತ್ತು ಅಮೇರಿಕಾ ಫ್ಲೋರಿಡಾದ ರೋಟರಿ ಕ್ಲಬ್ ನ್ಯೂ ಟಂಪಾ ನೂನ್ ಪುತ್ತೂರಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಕೊಡ ಮಾಡಿದ 6 ಡಯಾಲಿಸಿಸ್ ಯಂತ್ರಗಳ ಮತ್ತು ಆರ್ ಓ ಪ್ಲಾಂಟ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ರೋಟರಿ ಸೇವೆಯನ್ನು ಜನರು ಗುರುತಿಸಿದ್ದಾರೆ. ಸಮಾಜಮುಖಿ ಕೆಲಸವನ್ನು ರೋಟರಿ ಸಂಸ್ಥೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಸಂಘ, ಸಂಸ್ಥೆ ಮತ್ತು ಜನರು ನೀಡಿದ ಸಹಕಾರ ಮರೆಯಲು ಸಾಧ್ಯವಿಲ್ಲ. ವೈದ್ಯೋ ನಾರಾಯಣ ಹರಿ ಎಂಬುದನ್ನು ಇಲ್ಲಿನ ವೈದ್ಯರು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದ ಮಾಜಿ ಮಠಂದೂರು ನಾನು ಶಾಸಕನಾಗಿದ್ದಾಗ ಸದನದಲ್ಲಿ ಮೆಡಿಕಲ್ ಕಾಲೇಜು ಬಗ್ಗೆ ಪ್ರಸ್ತಾಪಿಸಿದ್ದೆ ಮೆಡಿಕಲ್ ಕಾಲೇಜಿಗೆ ಪೂರಕವಾಗಿ 300 ಬೆಡ್ ಆಸ್ಪತ್ರೆ ಮಾಡಿ ಎಂದಿದ್ದರು. ಆ ಕಾರಣಕ್ಕಾಗಿಯೇ ಜಾಗ ಕಾಯ್ದಿರಿಸಿದ್ದೆವು ಎಂದು ಹೇಳಿದರು. ಇದೇ ವೇಳೆ ಶಾಸಕರು, ನಮ್ಮ ಜೀವನ ಶೈಲಿಯನ್ನು ಬದಲಾಯಿಸಿದರೆ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕಿವಿ ಮಾತನ್ನು ಹೇಳಿದರು.
ವಿಡಿಯೋಗಾಗಿ ಇಲ್ಲಿ ಕ್ಲಕ್ ಮಾಡಿ