ಕಲ್ಲಡ್ಕ ಶ್ರೀರಾಮ ಕಾಲೇಜು ಚಾಂಪಿಯನ್ಸ್, ಗುರುದೇವ ಕಾಲೇಜು ರನ್ನರ್ಸ್
ಪುತ್ತೂರು : ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಮಟ್ಟದ ಅಂತರ್ ಕಾಲೇಜು ಸ್ಪರ್ದೆ ಕೃತ್ವ ಇದರ ಸಮಾರೋಪ ಕಾರ್ಯಕ್ರಮ ಜೂ.8ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಸ್ಡಂ ಎಜುಕೇಶನ್ ತರಬೇತುದಾರ ಗುರು ತೇಜ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಠ್ಯಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನಗೊಳಿಕೊಳ್ಳಬೇಕು ಎಂದು ಹೇಳಿದರು.
ಹಾಗೆಯೇ ಮತ್ತೋರ್ವ ಅತಿಥಿಯಾಗಿದ್ದ ಸ್ನೇಹ ಸಿಲ್ಕ್ನ ಮಾಲಕ ಸತೀಶ್ ಎಸ್ ಭವಿಷ್ಯವನ್ನು ಶಿಕ್ಷಣ ರೂಪಿಸುವ ಹಾಗೆಯೇ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸುದರಿಂದ ನಮ್ಮಲ್ಲಿ ಮನೋಸ್ಥೈರ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಯಂತ್ ನುಡುಬೈಲು ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ UG Level Festಗೆ ಸುಮಾರು 36 ಕಾಲೇಜುಗಳು ಭಾಗವಹಿಸುವಂತೆ ಮಾಡಿದ “ಕೃತ್ವ 2k23” ಆಯೋಜನಾ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದರು ಹಾಗೂ ಸ್ಪಧಾರ್ಥಿಗಳಿಗೆ ಶುಭಹಾರೈಸಿದರು.
ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕೃತ್ವ ಫೆಸ್ಟ್ನ ಸಂಯೋಜಕರಾದ ರಕ್ಷಣ್ ಟಿ.ಆರ್, ವಿದ್ಯಾರ್ಥಿ ನಾಯಕ ಗಗನ್ದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸವಿದೇಚಮ್ಮ ಸ್ವಾಗತಿಸಿ, ಟೀನಾ ವಂದಿಸಿದರು. ವಿದ್ಯಾರ್ಥಿ ಬಳಗ ಪ್ರಾರ್ಥಿಸಿ, ರಿಯಾ ಪೊನ್ನಮ್ಮ ನಿರೂಪಿಸಿದರು.
“ಕೃತ್ವ 2k23” ಸ್ಪರ್ದೆಯಲ್ಲಿ ಚಾಂಪಿಯನ್ಸ್- ಶ್ರೀರಾಮ ಕಾಲೇಜು ಕಲ್ಲಡ್ಕ ‘ಸಮಗ್ರ ಚಾಂಪಿಯನ್’ ಮತ್ತು ಶ್ರೀ ಗುರುದೇವಾ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ರನ್ನರ್ಸ್ ಆಗಿ ಮೂಡಿ ಬಂದಿತು.
ಬೆಸ್ಟ್ ಮ್ಯಾನೇಜರ್- ಅನ್ಮಯ್, ಅಂಬಿಕಾ ಕಾಲೇಜು, ಪುತ್ತೂರು
ಫಿನಾನ್ಸ್- ಪ್ರಥಮ ಮೆಲ್ವಿನ್ ಡಿ ಸೋಜಾ & ತೇಜಸ್ ರಾಜ್ ಸೇಂಟ್ ಫಿಲೋಮಿನಾ ಕಾಲೇಜು, ಪುತ್ತೂರು, ದ್ವಿತೀಯ ಯಶ್ಪಾಲ್ & ಸುಮನಾ ಎಸ್.ಕೆ ಕೆನರಾ ಕಾಲೇಜು, ಮಂಗಳೂರು
ಮಾರ್ಕೇಟಿಂಗ್- ಪ್ರಥಮ ಎಸ್.ಡಿ.ಎಂ ಉಜಿರೆ ದ್ವಿತೀಯ- ಅಂಬಿಕಾ ಕಾಲೇಜು, ಪುತ್ತೂರು
ಗ್ರೂಪ್ ಡ್ಯಾನ್ಸ್-ಪ್ರಥಮ ಸ.ಪ್ರ. ಕಾಲೇಜು ಜಿಡೆಕಲ್ಲು, ದ್ವಿತೀಯ- ಸ.ಪ್ರ. ಕಾ. ಉಪ್ಪಿನಂಗಡಿ
ಮೋವಿ ಸ್ಪೂಫ್- ಪ್ರಥಮ ವಿವೇಕಾನಂದ ಕಾಲೇಜು ತೆಂಕಿಲ, ದ್ವಿತೀಯ ಗುರುದೇವಾ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ
ಸ್ಟೋರಿ ಬಿಲ್ಡಿಂಗ್ – ಪ್ರಥಮ ಸುಶ್ಮಿತಾ ಸ.ಪ್ರ.ದ ಮಹಿಳಾ ಕಾಲೇಜು ಪುತ್ತೂರು, ದ್ವಿತೀಯ-ಡೆನ್ಸಾನ್ ಡಿ ಸಿಲ್ವಾ ಮಿಲಾಗ್ರಿಸ್ ಕಾಲೇಜು ಮಂಗಳೂರು
ಮಲ್ಟಿ ಟಾಸ್ಕಿಂಗ್- ಪ್ರಥಮ ಪ್ರೇಮ್ ಸಾಗರ್ ಗುರುದೇವಾ ಕಾಲೇಜು ಬೆಳ್ತಂಗಡಿ, ದ್ವಿತೀಯ ಕೆ ಸಮೃದ್ಧಿ ಶೆಣೈ ಸೇಂಟ್ ಪಿಲೋಮಿನಾ ಕಾಲೇಜು, ಪುತ್ತೂರು
ಪಾಟ್ ಡೆಕೊರೇಶನ್- ಪ್ರಥಮ ಪ್ರತೀಕ್ಷಾ ಶ್ರೀರಾಮ ಕಾಲೇಜು ಕಲ್ಲಡ್ಕ, ದ್ವಿತೀಯ- ಹಲೀಮ ಹಸ್ನಾ ಇಂಡಿಯನ್ ಡಿಸೈನ್ ಕಾಲೇಜು, ಮಂಗಳೂರು
ಪ್ಯಾಶನ್ ಶೋ- ಪ್ರಥಮ ಶ್ರೀರಾಮ ಕಾಲೇಜು ಕಲ್ಲಡ್ಕ, ದ್ವಿತೀಯ ಮಿಫ್ಟ್ ಕಾಲೇಜು, ಮಂಗಳೂರು ಟ್ಯಾಟೂಯಿಂಗ್- ಪ್ರಥಮ ಹೇಮರಾಜ್ LCR ಇಂಡಿಯನ್ ಇನ್ಟಿಟ್ಯೂಷನ್, ದ್ವಿತೀಯ- ಹಲೀಮ ಹಸ್ನಾ ಇಂಡಿಯನ್ ಡಿಸೈನ್ ಕಾಲೇಜು, ಮಂಗಳೂರು ಡ್ರಾಯಿಂಗ್- ಪ್ರಥಮ ಶಿವನಿವಾಸ ಶ್ರೀರಾಮ ಕಲ್ಲಡ್ಕ, ದ್ವಿತೀಯ ನಿಶಾಂತ್ ಸ.ಪ್ರ.ದ ಕಾಲೇಜು ಉಪ್ಪಿನಂಗಡಿ ಫೇಸ್ ಆಫ್ ಕೃತ್ವ- ಪ್ರತೀಕ್ಷಾ, ಸ.ಪ್ರ.ದ.ಮ. ಕಾಲೇಜು ಪುತ್ತೂರು