





ಪುತ್ತೂರು:ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ‘ಸಮನ್ವಯ’ ಸಮಾಜ ವಿಜ್ಞಾನ ಸಂಘದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಚುನಾವಣೆ ಹಾಗೂ ಮಂತ್ರಿಮಂಡಲ ರಚನಾ ಪ್ರಕ್ರಿಯೆ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕನಾಗಿ ಭವಿಷ್ ಜಿ ಮತ್ತು ಉಪನಾಯಕನಾಗಿ ತಶ್ವಿತ್ ರಾಜ್ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಮುಕುಂದ ಮತ್ತು ಉಪನಾಯಕನಾಗಿ ಶ್ರೇಯಸ್ ರಾವ್ ಆಯ್ಕೆಯಾದರು.


ಪ್ರಮಾಣ ವಚನಾ ಸಮಾರಂಭದಲ್ಲಿ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಮಾತನಾಡಿ “ಎಳವೆಯಿಂದಲೇ ನಾಯಕತ್ವ ಗುಣವನ್ನು ಬೆಳೆಸಲು ಶಾಲಾ ಚುನಾವಣೆಯು ಉತ್ತಮ ವೇದಿಕೆಯಾಗಿದೆ. ನಾಯಕತ್ವದ ಗುಣವು ವೈಯಕ್ತಿಕ ಮತ್ತು ಸಾಮಾಜಿಕ ಒಳಿತಿಗೆ ಪ್ರೇರಕವಾಗಿದೆ. ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳು ತಮ್ಮ ಜವಾಬ್ದಾರಿ ತಿಳಿದು ನಿರಂತರ ಕಾರ್ಯೋನ್ಮುಖರಾಗಿರಬೇಕು” ಎಂದು ಶುಭ ಹಾರೈಸಿದರು.






ಸಂಘ ಸಂಯೋಜಕರಾದ ಲೀಲಾವತಿ ಮತ್ತು ಗೀತಾ ಸಭೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ ಪಠ್ಯ-ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಹಾಗೂ ಅದರಲ್ಲಿ ವಿದ್ಯಾರ್ಥಿ ದಿಶೆಯಿಂದ ತೋರಬೇಕಾದ ನಿರಂತರತೆಯ ಬಗ್ಗೆ ಮಾಹಿತಿ ನೀಡಿದರು.
2023-24ನೇ ಸಾಲಿನ ಮಂತ್ರಿ ಮಂಡಲಕ್ಕೆ ಪ್ರತಿಪಕ್ಷದ ನಾಯಕಿಯಾಗಿ ಸ್ವಸ್ಥ, ಸ್ಪೀಕರ್ – ನಂದನ್, ಸಾಂಸ್ಕೃತಿಕ ಮಂತ್ರಿ ಆದ್ಯಾ ಬಿ ಆರ್, ವಿದ್ಯಾಮಂತ್ರಿ- ಕವನ ಶ್ರೀ, ನೀರಾವರಿ ಮಂತ್ರಿ – ಸಾತ್ವಿಕ್ ಹೆಚ್.ಕೆ, ಗೃಹ ಮಂತ್ರಿ- ಮನ್ವಿತ್, ಕ್ರೀಡಾಮಂತ್ರಿ- ಜನಿತ್ ಕೆ.ಎಸ್, ಆರೋಗ್ಯ ಮಂತ್ರಿ – ಹೇಮಂತ್ ಜೆ.ಕೆ, ನ್ಯೆರ್ಮಲ್ಯ ಮಂತ್ರಿ – ತೇಜಸ್, ಕಾನೂನು ಮಂತ್ರಿ – ಶ್ರೀ ಲಕ್ಷ್ಮೀ, ಸಾರಿಗೆ ಮಂತ್ರಿ- ಧನುಷ್, ವಾರ್ತಾ ಮಂತ್ರಿ- ಚೈತ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ –ಅಕ್ಷಯ್, ಕಾರ್ಯದರ್ಶಿ – ಮಂಗಳಾದುರ್ಗಾ ಆಯ್ಕೆಯಾದರು.. ಶಾಲಾ ಸಹಶಿಕ್ಷ ಚಂದ್ರಶೇಖರ್ ಸುಳ್ಯಪದವು ಮತ್ತು ರಾಮ ನಾಯ್ಕ ಇವರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಸಹಶಿಕ್ಷಕರು ಸಹಕರಿಸಿದರು.


 
            