ಜಲಕ್ಷಾಮ ನಿವಾರಣೆ, ಲೋಕಸುಭಿಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ – ರಾಮಕುಂಜ ದೇವಸ್ಥಾನಕ್ಕೆ ಭಕ್ತರಿಂದ ಪಾದಯಾತ್ರೆ

0

ರಾಮಕುಂಜ: ಜಲಕ್ಷಾಮ ನಿವಾರಣೆ ಹಾಗೂ ಲೋಕ ಸುಭಿಕ್ಷೆಗಾಗಿ ’ನಮ್ಮ ನಡಿಗೆ ಶ್ರೀ ರಾಮಕುಂಜೇಶ್ವರನೆಡೆಗೆ’ ಪಾದಯಾತ್ರೆ ಜೂ.11ರಂದು ಬೆಳಿಗ್ಗೆ ಆತೂರಿನಿಂದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ತನಕ ನಡೆಯಿತು.


ಆತೂರಿನಲ್ಲಿರುವ ಶ್ರೀ ದೇವರ ದ್ವಾರದ ಬಳಿಯಿಂದ ಪಾದಯಾತ್ರೆ ಆರಂಭಗೊಂಡಿತು. ದೇವಸ್ಥಾನದ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಮಾಧವ ಆಚಾರ್ಯ ಇಜ್ಜಾವು ಹಾಗೂ ದೇವಸ್ಥಾನದ ಅರ್ಚಕ ಶ್ರೀನಿಧಿಅವರು ತೆಂಗಿನಕಾಯಿ ಒಡೆಯುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಆರಂಭಗೊಂಡ ಪಾದಯಾತ್ರೆಯಲ್ಲಿ ಗ್ರಾಮದ ಸುಮಾರು ೩೦೦ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಹೆಜ್ಜೆ ಹಾಕಿದರು. ಆತೂರಿನಿಂದ ಕಾಜರೊಕ್ಕು ಮೂಲಕ ದೇವಸ್ಥಾನಕ್ಕೆ ಪಾದಯಾತ್ರೆ ಆಗಮಿಸಿತು. ರಾಮಕುಂಜ ಶಾರದಾನಗರ ಶ್ರೀ ಶರದಾ ಭಜನಾ ಮಂಡಳಿಯ ಭಜನಾ ತಂಡದವರಿಂದ ನಡೆದ ಕುಣಿತ ಭಜನೆಯೂ ಪಾದಯಾತ್ರೆಗೆ ಮೆರುಗು ನೀಡಿತು. ದೇವಸ್ಥಾನದಲ್ಲಿ ಸಾಮೂಹಿಕ ಸಂಪ್ರಾರ್ಥನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಪವಿತ್ರಪಾಣಿ ನರಹರಿ ಉಪಾಧ್ಯಾಯ ಅವರು ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಅರ್ಚಕ ಅನಂತ ಉಡುಪ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ರಮೇಶ್ ರೈ ರಾಮಜಾಲು, ಯೋಗೀಶ್ ಕುಲಾಲ್ ಅಜ್ಜಿಕುಮೇರು, ಜನಾರ್ದನ ಗೌಡ ಬಾಂತೊಟ್ಟು, ಗಿರಿಯಪ್ಪ ಗೌಡ ಆನ, ಸಂಜೀವ ಶಾರದಾನಗರ, ವಿಮಲಾ ಕರುಣಾಕರ ಆರಿಂಜ, ಉತ್ಸವ ಸಮಿತಿ ಅಧ್ಯಕ್ಷ ರಮೇಶ ಉಪಾಧ್ಯಾಯ ಕಲ್ಲೇರಿ, ಕಾರ್ಯದರ್ಶಿ ಸತೀಶ್ ಭಟ್ ಎಂ., ಉಪಾಧ್ಯಕ್ಷರಾದ ದಿವಾಕರ ರಾವ್ ಪಂಚವಟಿ, ಧರ್ಮಪಾಲ ರಾವ್ ಕಜೆ, ರಾಮ ಭಟ್ ಬೃಂದಾವನ, ತಿಮ್ಮಪ್ಪ ಗೌಡ ಆನ, ಸದಸ್ಯರುಗಳಾದ ನಾರಾಯಣ ಭಟ್ ತೋಟ, ಗುಮ್ಮಣ್ಣ ಗೌಡ, ಮೋನಪ್ಪ ಕುಲಾಲ್, ಲಕ್ಷ್ಮೀನಾರಾಯಣ ರಾವ್, ಕೃಷ್ಣಮೂರ್ತಿ ಕಲ್ಲೂರಾಯ, ಪ್ರಶಾಂತ್ ಆರ್.ಕೆ., ತೇಜಕುಮಾರ್ ರೈ, ಶರತ್ ಕೆದಿಲ, ಪೂವಪ್ಪ ಗೌಡ ಸಂಪ್ಯಾಡಿ, ವೆಂಕಟೇಶ್ವರ ಭಟ್ ಹೂಂತಿಲ, ಸೂರಪ್ಪ ಕುಲಾಲ್ ಬರೆಮೇಲು, ದೇವಸ್ಥಾನದ ಸಿಬ್ಬಂದಿ ಅಶೋಕ್ ಹಲ್ಯಾರ ಮತ್ತಿತರರ ಪ್ರಮುಖರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

’ಜಲಕ್ಷಾಮ ನಿವಾರಣೆ ಹಾಗೂ ಲೋಕಸುಭೀಕ್ಷೆಗಾಗಿ ಶ್ರೀದೇವರಿಗೆ ಸಿಯಾಳಭಿಷೇಕ, ಪ್ರದಕ್ಷಿಣೆ ಸೇವೆ ಈ ವರ್ಷದಲ್ಲಿ ಸಲ್ಲಿಸಲಾಗಿದೆ. ಇದೀಗ ಆತೂರಿನಿಂದ ದೇವಸ್ಥಾನದ ತನಕ ಪಾದಯಾತ್ರೆ ನಡೆಸಿ ಸಂಪ್ರಾರ್ಥನೆ ಸಲ್ಲಿಸಲಾಗಿದೆ. ಪಾದಯಾತ್ರೆಯ ಸಂಪನ್ನ ಕಾಲದಲ್ಲಿ ಮಳೆಯೂ ಆಗಿರುವುದು ವಿಶೇಷವಾಗಿದೆ ’.
-ಗುರುಪ್ರಸಾದ ರಾಮಕುಂಜ
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ

LEAVE A REPLY

Please enter your comment!
Please enter your name here