





ಬಡಗನ್ನೂರುಃ ಅರಿಯಡ್ಕ ವಲಯದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಸರಕಾರಿ ಪ್ರೌಢಶಾಲೆ ಪಾಪೆಮಜಲು ಶಾಲೆಯಲ್ಲಿ ನ. 21 ನಡೆಯಿತು.


ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಮಹಾಬಲ ರೈ ಕರ್ನೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸ್ವಾಸ್ಥ್ಯ ಸಂಕಲ್ಪ ಎಂದರೆ ಆರೋಗ್ಯ ಜೀವನ ಸಂಕಲ್ಪ ದೃಢ ಸಂಕಲ್ಪ ಎಂಬುದಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಬಂದಂತ ರೋಗಗಳ ಬಗ್ಗೆ ಮತ್ತು ಮಾರಣಾಂತಿಕ ಕಾಯಿಲೆ, ಹವ್ಯಾಸ ಮದ್ಯಪಾನ ,ಧೂಮಪಾನ. ಜಂಕ್ ಫುಡ್ ಇದರಿಂದ ದೂರ ಇರುವಂತೆ ತಿಳಿಸಿದ ಅವರು ಪರಿವರ್ತನೆಯಿಂದ ಬದಲಾವಣೆ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಒಂದು ಸಂಘದಿಂದ ಅರಿತು ಮುನ್ನಡೆಯುವ ವ್ಯವದಾನ. ಮನೆಯ ಆರ್ಥಿಕತೆ ಪರಿಸ್ಥಿತಿ, ಪರಿಸರ ಸಂರಕ್ಷಣೆ ಅಗತ್ಯ, ದುಷ್ಟಚಟದಿಂದ ಬರುವಂತಹ ಅನಾಹುತಗಳು, ಮನಸಿನ ಪರಿವರ್ತನೆಗಳು ಶಿಕ್ಷಣದಲ್ಲಿ ಉನ್ನತ ಸಾಧನೆಗಳು ಎಂಬುದರ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು .ಈ ಸಂದರ್ಭದಲ್ಲಿ ಮಕ್ಕಳ ಗಮನವನ್ನು ಸೆಳೆಯುವಲ್ಲಿ ಮಕ್ಕಳಿಗೆ ಪುಸ್ತಕ ಕೊಟ್ಟು ಪ್ರೋತ್ಸಾಹಿಸಿದರು. ಬಳಿಕ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪದ ಬಗ್ಗೆ ಪ್ರತಿಜ್ಞಾ ವಿಧಿ ಭೋಧಿಸಿದರು.






ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿ,ಬಿ ಒಕ್ಕೂಟದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಏ ಒಕ್ಕೂಟದ ಮಾಜಿ ಅಧ್ಯಕ್ಷ ಕುಂಞಿರಾಮ ಮಣಿಯಾಣಿ,, ವಲಯ ಮೇಲ್ವಿಚಾರಕ ಹರೀಶ್ ಕುಲಾಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭೆಯಲ್ಲಿ ಶಾಲಾ ಶಿಕ್ಷಕ ವೃಂದದವರು, ಸೇವಾ ಪ್ರತಿನಿಧಿಗಳಾದ ಲೀಲಾವತಿ ಮತ್ತು ಸುಶ್ಮಿತಾ, ಸಿ ಎಸ್ ಸಿ ನಿಶಾ,, ಬಿ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಮತ್ತು ಶಾಲಾ ಮಕ್ಕಳು ಮಕ್ಕಳು ಉಪಸ್ಥಿತರಿದ್ದರು,
ವಲಯ ಮೇಲ್ವಿಚಾರಕ ಹರೀಶ್ ಕುಲಾಲ್, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ದೈಹಿಕ ಶಿಕ್ಷಕಿ ಪ್ರವೀಣ ರೈ ವಂದಿಸಿದರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.




