ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ 2022-23ನೇ ಸಾಲಿನಲ್ಲಿ ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸಂತ ಪಿಲೋಮೀನ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಕುಮಾರಿ ತೃಪ್ತಿ ಎನ್ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುತ್ತಿರುವ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಇವರು ಬೋಳಿಕ್ಕಳ ನಿವಾಸಿ ಪದ್ಮಲ ಕುಮಾರಿಯವರ ಪುತ್ರಿ. ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ. ಸಾಂದೀಪನಿ ವಿದ್ಯಾ ಸಂಸ್ಥೆಯ ನವೀನ್ ಕುಮಾರ್. ಬಿ ಯೋಗ ತರಬೇತಿ ನೀಡಿರುತ್ತಾರೆ.
ಪಿಲೋಮೀನ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮಾರ್ಗದರ್ಶನ ನೀಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಅಶೋಕ್ ರಾಯನ್ ಕ್ರಾಸ್ತ ತಿಳಿಸಿರುತ್ತಾರೆ.