ಆಲಂಕಾರು: ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಶ್ರೀ ದುರ್ಗಾಂಬಾ ಕಲಾ ಸಂಗಮ ಮತ್ತು ಶ್ರೀ ಆದಿಶಕ್ತಿ ಭಜನಾ ಮಂಡಳಿಯವರ ಜಂಟಿ ಆಶ್ರಯದಲ್ಲಿ ಇತ್ತಿಚ್ಚೆಗೆ ನಿಧನರಾದ ಚಂದ್ರಶೇಖರ.ಕೆ ಆಲಂಕಾರು ಅವರಿಗೆ ಶ್ರದ್ದಾಂಜಲಿ ಸಭೆ ಹಾಗೂ ಯಕ್ಷಗಾನ ತಾಳಮದ್ದಲೆ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಶರವೂರಿನ ಅರ್ಚಕ ರಾಘವೇಂದ್ರ ಪ್ರಸಾದ್ ತೋಟಂತಿಲ ರವರು ದೀಪ ಬೆಳಗಿಸಿದ ನಂತರ ಆದಿಶಕ್ತಿ ಭಜನಾ ಮಂಡಳಿ ಹಾಗೂ ಆದಿಶಕ್ತಿ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಶ್ರದ್ದಾಂಜಲಿ ಸಭೆ ನಡೆಯಿತು. ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆಯವರು ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜ್ ನ ಪ್ರಾಂಶುಪಾಲ ಗಣರಾಜ್ ಕುಂಬ್ಳೆಯವರು ನುಡಿನಮನ ಸಲ್ಲಿಸಿದರು.ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಪ್ರಮುಖರಾದ ಗುಡ್ಡಪ್ಪ ಬಲ್ಯ,ಮಹಾಬಲೇಶ್ವರ ಭಟ್ ಪೆರಿಯಡ್ಕ, ಗೋಪಾಲ ಶೆಟ್ಟಿ ಕಳೆಂಜ, ನಾಗಪ್ಪ ಗೌಡ ಮರುವಂತಿಲ, ಸುಬ್ರಹ್ಮಣ್ಯರಾವ್ ನಗ್ರಿ, ಬಾಲಕೃಷ್ಣ ರೈ ಕಡಬ, ಗೋಪಾಲಕೃಷ್ಣ ಭಟ್ ನೈಮಿಷ, ಅವರು ಆಗಲಿದ ಚಂದ್ರಶೇಖರ.ಕೆ ಅವರಿಗೆ ನುಡಿನಮನ ಸಲ್ಲಿಸಿದರು. ವೇದಿಕೆಯಲ್ಲಿ ಆದಿಶಕ್ತಿ ಭಜನಾಮಂಡಳಿಯ ಅಧ್ಯಕ್ಷ ಲಿಂಗಪ್ಪ ಮಡಿವಾಳ ಹಾಗೂ ಚಂದ್ರಶೇಖರ .ಕೆ ಯವರ ಸೊಸೆ ಸುನೀತಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಚಂದ್ರಶೇಖರ.ಕೆ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯ ಲಕ್ಷೀ ೬ ನಾರಾಯಣ ಸ್ವಾಗತಿಸಿ,ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ ಧನ್ಯವಾದ ಸಮರ್ಪಿಸಿದರು.
ನಂತರ ಪ್ರಸಾದ ಭೋಜನ ನಡೆದು ಯಕ್ಷಗಾನ ಮದ್ದಲೆ ಸೀತಾಪಹಾರ ಮತ್ತು ಕೃಷ್ಣ ನಿರ್ಯಾಣ ನಡೆಯಿತು. ಭಾಗವತರಾಗಿ ಗೋಪಾಲಕೃಷ್ಣ ಭಟ್ ನೈಮಿಷ, ಪದ್ಮನಾಭ ಕುಲಾಲ್,ಬಾಲಕೃಷ್ಣ ರೈ ಕಡಬ, ಆನಂದ ಸವಣೂರು, ಮಂಜುನಾಥ ದೇವಾಡಿಗ, ಡಿ.ಕೆ ಆಚಾರ್ಯ, ಕು. ಶ್ರೇಯಾ ಚೆಂಡೆ ಮದ್ದಲೆಯಲ್ಲಿ ಚಂದ್ರದೇವಾಡಿಗ, ಮೋಹನ ಶರವೂರು, ಶ್ರೀಹರಿ ದೇವಾಡಿಗ ಬಿಳಿವರ್ಗ, ಮುಮೇಳದಲ್ಲಿ ಗೋಪಾಲಕೃಷ್ಣ ಪಡ್ಡಿಲ್ಲಾಯ ತೋಟಂತಿಲ, ಗಣರಾಜ್ ಕುಂಬ್ಳೆ, ಗುಡ್ಡಪ್ಪ ಗೌಡ ಬಲ್ಯ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಸತೀಶ್ ಆಚಾರ್ಯ ಮಾಣಿ, ಪ್ರಸಾದ್ ಸವಣೂರು, ಹರಿಕಿರಣ್ ಕೊಯಿಲ, ಸುಬ್ರಹ್ಮಣ್ಯ ರಾವ್ ನಗ್ರಿ, ಜಯರಾಂ ನಾಲ್ಗುತ್ತು, ನಾರಾಯಣ ಭಟ್, ಬಿ.ದಿವಾಕರ ಆಚಾರ್ಯ ನೆರೆಂಕಿ, ರಾಘವೇಂದ್ರ ಪ್ರಸಾದ್ ಭಟ್ ತೋಟಂತಿಲ, ಬಾಲಾಕೃಷ್ಣ ಕೇಪುಳು ಅವರು ಮುಮ್ಮೇಳದಲ್ಲಿ ಸಹಕರಿಸಿದರು.ಒಟ್ಟು ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ದುರ್ಗಾಂಬಾ ಕಲಾ ಸಂಗಮ ಮತ್ತುಆದಿಶಕ್ತಿ ಭಜನಾ ಮಂಡಳಿಯ ಪದಾದಿಕಾರಿಗಳು ಮತ್ತು ಸರ್ವಸದಸ್ಯರುಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.