






ಪುತ್ತೂರು:ಪುತ್ತೂರು ಶ್ರೀ ಸಾಯಿ ಕಲಾ ಯಕ್ಷಬಳಗ ಡಾ. ಶಿವರಾಮ ಕಾರಂತ ಬಾಲವನ ಯಕ್ಷಗಾನ ತಂಡದಿಂದ ಧರ್ಮಸ್ಥಳ ಮಂಜುನಾಥೇಶ್ವರ ದೇವರ ಲಕ್ಷದೀಪೋತ್ಸವದಲ್ಲಿ ಶ್ರೀ ದೇವಿ ಲೀಲಾಮೃತ ಯಕ್ಷಗಾನ ಬಯಲಾಟ ನ.17ರಂದು ಘನ ವಸ್ತು ಸಂಗ್ರಹಾಲಯದ ಸಭಾಭವನದಲ್ಲಿ ನಡೆಯಿತು.




ಯಕ್ಷಗಾನದಲ್ಲಿ ಹಿಮ್ಮೇಳ ಭಾಗವತರಾಗಿ ಹೇಮಸ್ವಾತಿ ಕುರಿಯಾಜೆ, ಶ್ರುತಿ ಕಲಾ ,ಚೆಂಡೆ ಮದ್ದಳೆಯಲ್ಲಿ ಹರಿಪ್ರಸಾದ್ ಶೆಟ್ಟಿ ಇಚಲಂಪಾಡಿ, ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಕೃಷ್ಣ ಚೈತನ್ಯ ಪೇರಾಲು,ಚಕ್ರತಾಳದಲ್ಲಿ ಪುರುಷೋತ್ತಮ ಆಚಾರ್ಯ ಸುಳ್ಯ,ಮುಮ್ಮೇಳದಲ್ಲಿ ದೇವೇಂದ್ರನಾಗಿ ದೇವಿಕ ಕುರಿಯಾಜೆ,ಅಗ್ನಿಯಾಗಿ ಪೂಜ ಶ್ರೀ ಅಡ್ಯ,ವಾಯುವಾಗಿ ಹವೀಕ್ಷ ಗುತ್ತಿಗಾರು,ಮಾಲಿನಿಯಾಗಿ ಪ್ರಿಯಾ ಉಬರಡ್ಕ,ಬ್ರಹ್ಮನಾಗಿ ಹನೀಕ್ಷಾ ಗುತ್ತಿಗಾರು,ಸುಪಾರ್ಶ್ವಕನಾಗಿ ಚೈತಾಲಿ ಕಾಂಚೋಡು,ವಿದ್ಯುನ್ಮಾಲಿಯಾಗಿ ಪೃಥ್ವಿ ಶೆಟ್ಟಿ ಕಾಟುಕುಕ್ಕೆ,ಯಕ್ಷನಾಗಿ ಸಂದೇಶ್ ದೀಪ್ ರೈ ಕಲ್ಲಂಗಳ,ಮಹಿಷಾಸುರನಾಗಿ ಪ್ರೇಮಾ ಕಿಶೋರ್ ಪುತ್ತೂರು,ಮಾಲಿನಿದೂತನಾಗಿ ಭವಿಷ್ ಭಂಡಾರಿ ಪುತ್ತೂರು,ಶಂಖಾಸುರನಾಗಿ ಜ್ಯೋತಿ ಅಶೋಕ ಕೆದಿಲ,
ದುರ್ಗಾಸುರನಾಗಿ ಭವಿಷ್ ಭಂಡಾರಿ ಪುತ್ತೂರು,ಶ್ರೀದೇವಿಯಾಗಿ ಶ್ರುತಿ ವಿಸ್ಮಿತ್ ಗೌಡ ಬಲ್ನಾಡು,ಈಶ್ವರನಾಗಿ ಈಶ್ವರನಾಗಿ ಶಿಲ್ಪ ಉದ್ಯಾವರ,ವಿಷ್ಣುವಾಗಿ ಪ್ರಸಕ್ತ ರೈ ಸುರೋಳಿ,ವೇಷಭೂಷಣರಾಗಿ ಕಲಾಸುರಭಿ ಕಲ್ಮಡ್ಕ ಅಭಿನಯಿಸಿದರು.







ಈ ಸಂದರ್ಭದಲ್ಲಿ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಯಿ ಕಲಾ ಬಳಗದ ನಿರ್ದೇಶಕಿ ಪ್ರೇಮ ಕಿಶೋರ್ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.










