ಉಪ್ಪಿನಂಗಡಿಯಲ್ಲಿ ಹೊಡೆದಾಟ- 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

0

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣ ಪರಿಸರದಲ್ಲಿ ವಿದ್ಯಾರ್ಥಿಗಳ ಗುಂಪಿನೊಳಗೆ ವಾಗ್ವಾದ ಬೆಳೆಸಿಕೊಂಡು ಹೊಡೆದಾಟದಲ್ಲಿ ತೊಡಗಿದ್ದ 8 ಮಂದಿ ಕಾಲೇಜು ವಿದ್ಯಾರ್ಥಿಗಳ ವಿರುದ್ದ ಪೊಲೀಸರು ಭಾರತೀಯ ದಂಡ ಸಂಹಿತೆ 160 ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.


ಕ್ಷುಲ್ಲಕ ಕಾರಣವನ್ನು ಮುಂದಿರಿಸಿ ಬಸ್ ನಿಲ್ದಾಣದಲ್ಲಿ ಸಂಘರ್ಷ ನಿರತ ವಿದ್ಯಾರ್ಥಿಗಳ ಗುಂಪನ್ನು ಕರ್ತವ್ಯದಲ್ಲಿದ್ದ ಪೊಲೀಸರು ಸಮಾಧಾನಿಸಿ ಚದುರಿಸಲು ಯತ್ನಿಸಿದರೂ ಲೆಕ್ಕಿಸದೆ ದೂಡಾಟ ಹೊಡೆದಾಟದಲ್ಲಿ ತೊಡಗಿದ್ದ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಗಿರೀಶ್ (21) , ಅಭಿಷಿತ್(21) , ಧನುಷ್ (19) , ಮೋಹನ್ (19) ನಂದನ್ (19), ವಿನ್ಯಾಸ್ (18) , ರೂಪೇಶ್(20) ಹಿತೇಶ್(19), ಎಂಬವರನ್ನು ವಶಕ್ಕೆ ಪಡೆದು ಅವರ ವಿರುದ್ದ ಸಾರ್ವಜನಿಕ ಶಾಂತಿಭಂಗದ ಆರೋಪದನ್ವಯ ಪೊಲೀಸ್ ಸಿಬ್ಬಂದಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here