ಪುತ್ತೂರು: ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಜೂ.16 ಬೆಳಿಗ್ಗೆ 11.30 ಗಂಟೆಗೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆ, ತಕರಾರುಗಳನ್ನು ಪರಶೀಲಿಸಲಾಗುವುದು.
ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರ ಮುಖೇನ ಅಂಚೆ ಅದಾಲತ್ ತಲೆ ಬರಹದಡಿ ಜೂ.16ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ, ಪುತ್ತೂರು-574201, ವಿಳಾಸಕ್ಕೆ ದೂರುಗಳನ್ನು ಕಳುಹಿಸಬಹುದು. ಅದೇ ದಿನ ಗಂಟೆ 11.30 ಓಳಗೆ ದೂರವಾಣಿ ಸಂಖ್ಯೆ 08251-230201,230295ಕ್ಕೆ ನೇರವಾಗಿಯೂ ಸಂಪರ್ಕಿಸಬಹುದು. ತಮ್ಮ ದೂರುಗಳನ್ನು ಈ ಮೇಲ್ [email protected] ಮೂಲಕ ಅದಾಲತ್ತಿಗೆ ಮೊದಲು ತಲುಪುವಂತೆ ಕಳುಹಿಸುವುದು. ಪುತ್ತೂರು ಅಂಚೆ ವಿಭಾಗಕ್ಕೆ ಸಂಬಂಧಿಸಿದ ದೂರುಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.