ಪುತ್ತೂರು : ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ, ನಿತ್ಯ ನೂತನ ತಂತ್ರಜ್ಞಾನ ಅಳವಡಿಕೆ ಜೊತೆಗೆ ಕಡಿಮೆ ಬೆಲೆಯೊಡನೆ ಆಕರ್ಷಕ ರೀತಿಯ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಸರಳ, ಸುಲಭ ರೀತಿ ನಿರ್ವಹಣೆಯನ್ನೂ ಮಾಡಬಲ್ಲ ಕಾರಣಕ್ಕಾಗಿ ಪ್ರಾಬಲ್ಯವನ್ನು ಗಳಿಸಿರುವ ಮಾರುತಿ ಸಂಸ್ಥೆ ಎಲ್ಲಾ ವರ್ಗದ ಜನರ ಕಾರು ಖರೀದಿ ಸಂದರ್ಭ ಕೂಡ ಅದ್ಬುತ ಕೊಡುಗೆಗಳನ್ನು ಪ್ರಿಯ ಗ್ರಾಹಕರಿಗಾಗಿ ನೀಡುವಲ್ಲೂ ಮುಂದಾಗಿದೆ. ಈಗ ಇಂತಹದ್ದೇ ಕೊಡುಗೆ ಘೋಷಣೆ ಮೂಲಕ ಕಾರು ಖರೀದಿ ಮಾಡೋ ಜನತೆಗೆ ಭರಪೂರ ಉಳಿತಾಯ ಕೊಡುಗೆ ಪ್ರಾರಂಭಗೊಂಡಿದ್ದು, ಗ್ರಾಮೀಣ ಮಹೋತ್ಸವ ಮೂಲಕ ಗ್ರಾಹಕರ ಕೈ ಸೇರಲಿದೆ. ಜಿಲ್ಲೆಯ ತನ್ನ ಪ್ರಮುಖ ಡೀಲರ್, ಹಾರಾಡಿ ಬಳಿಯಿರುವ ಭಾರತ್ ಅಟೋಕಾರ್ಸ್ ಜತೆಯಾಗಿ, ಎರಡು ದಿನದ ಬೃಹತ್ ಗ್ರಾಮೀಣ ಮಹೋತ್ಸವನ್ನು ಜೂ. 12ರಂದು ಪುತ್ತೂರಿನ ಧನ್ವಂತರಿ ಆಸ್ಪತ್ರೆ ಮುಂಭಾಗ ಪ್ರಾರಂಭಿಸಿದೆ. ಜೂ.13ರ ಸಂಜೆ ತೆರೆ ಕಾಣಲಿದೆ. ಯಾವುದೇ ಮಾದರಿಯ ಹಳೇ ಕಾರುಗಳನ್ನು ಬದಲಾಯಿಸೋ ಅವಕಾಶ, ನೂರರಷ್ಟು ಸಾಲದ ವ್ಯವಸ್ಥೆಯೂ ಇರಲಿದ್ದು ,ಅತ್ಯುತ್ತಮ ಕೊಡುಗೆಗಳು ಸಹ ಸಿಗಲಿವೆ.
ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 68 ಸಾವಿರ ವರೆಗಿನ ಬೃಹತ್ ಉಳಿತಾಯ ಕೊಡುಗೆಯನ್ನೂ ಸಂಸ್ಥೆ ಘೋಷಣೆ ಮಾಡಿದ್ದು, ದ್ವಿ ಚಕ್ರ ವಾಹನ ಹೊಂದಿರುವಂಥ ಗ್ರಾಹಕರು ತಮ್ಮ ಆರ್.ಸಿ ದಾಖಲೆ ನೀಡಿ ಎಡಿಷನ್ ಆಫರ್ ಕೂಡ ಪಡೆಯಬಹುದೆಂದು ಟೀಮ್ ಲೀಡರ್ ಸಂತೋಷ್ ತಿಳಿಸಿದ್ದಾರೆ.
ಬೈಕ್, ಸ್ಕೂಟರ್ RC ನೀಡಿ, ಹೆಚ್ಚುವರಿ ಲಾಭ ಪಡೆಯಿರಿ!
ಭಾರತ್ ವತಿಯಿಂದ ಬೈಕ್, ಸ್ಕೂಟರ್ ಸವಾರರಿಗೆ ಒಂದೊಳ್ಳೆಯ ಅವಕಾಶ ತೆರೆದುಕೊಂಡಿದ್ದು, ತಮ್ಮ ಬಳಿಯಿರುವ ದ್ವಿಚಕ್ರ ವಾಹನದ RC ತೋರಿಸಿ, ಕಾರು ಮಾಲೀಕರಾಗೋ ಕನಸು ನನಾಸಗೋ ಅವಕಾಶ ಒದಗಿ ಬಂದಿದ್ದು, ಹೆಚ್ಚುವರಿ ಲಾಭವನ್ನು ಕೂಡ ನೀಡಲು ಸಂಸ್ಥೆ ಮುಂದಾಗಿದೆ
ವಿವರಗಳಿಗಾಗಿ -9483542030, 9538777230.