ನಾಳೆ(ಜೂ.14) ಬ್ಲಡ್ ಹೆಲ್ಪ್’ಲೈನ್ ಕರ್ನಾಟಕ, ರೆಡ್‌ಕ್ರಾಸ್‌ನಿಂದ ಜಾಗತಿಕ ರಕ್ತದಾನಿಗಳ ದಿನಾಚರಣೆ, ರಕ್ತದಾನ ಶಿಬಿರ

0

ಪುತ್ತೂರು: ರಕ್ತದಾನ ಪ್ರಕ್ರಿಯೆಯಲ್ಲಿ ಕಳೆದ ಏಳು ವರ್ಷಗಳಿಂದ ಮುಂಚೂಣಿಯಲ್ಲಿರುವ ಬ್ಲಡ್ ಹೆಲ್ಪ್’ಲೈನ್ ಕರ್ನಾಟಕ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಮತ್ತು ರೋಟರಿ ಕ್ಯಾಂಪ್ಕೊ ರಕ್ತ ನಿಧಿ ಇವುಗಳ ಸಹಯೋಗದಲ್ಲಿ ಜಾಗತಿಕ ರಕ್ತದಾನಿಗಳ ದಿನಾಚರಣೆ ಮತ್ತು ಸಾರ್ವಜನಿಕ ರಕ್ತದಾನ ಶಿಬಿರವು ಜೂ.14ರಂದು ರೋಟರಿ ಕ್ಯಾಂಪ್ಕೊ ರಕ್ತ ನಿಧಿ ವಠಾರದಲ್ಲಿ ಜರಗಲಿರುವುದು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ರಕ್ತದಾನ ಮಾಡಲು ಅವಕಾಶವಿದ್ದು ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬಹುದೆಂದು ಬ್ಲಡ್ ಹೆಲ್ಪ್’ಲೈನ್ ಕರ್ನಾಟಕ ಇದರ ಕಾರ್ಯನಿರ್ವಾಹಕ ಇಫಾಜ಼್ ಬನ್ನೂರು ಮತ್ತು ರೆಡ್‌ಕ್ರಾಸ್ ಪುತ್ತೂರು ಇದರ ಕಾರ್ಯಕ್ರಮ ಸಂಯೋಜನಾ ಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here