ನೆಲ್ಯಾಡಿ: ಕೊಣಾಲು ಗ್ರಾಮ ಪಂಚಾಯತ್ ರಚನೆಗೆ ಸರಕಾರದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಗೋಳಿತ್ತೊಟ್ಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಮಾಡಲಾಗಿದೆ.
ಗೋಳಿತ್ತೊಟ್ಟು ಗ್ರಾ.ಪಂ.ವ್ಯಾಪ್ತಿಗೆ ಗೋಳಿತ್ತೊಟ್ಟು, ಕೊಣಾಲು ಹಾಗೂ ಆಲಂತಾಯ ಗ್ರಾಮಗಳು ಬರುತ್ತವೆ. ಆದ್ದರಿಂದ ಗೋಳಿತ್ತೊಟ್ಟು ಗ್ರಾ.ಪಂ.ನಿಂದ ಕೊಣಾಲು ಗ್ರಾಮವನ್ನು ಪ್ರತ್ಯೇಕಿಸಿ ಹೊಸದಾಗಿ ಗ್ರಾ.ಪಂ.ರಚನೆ ಮಾಡಲು ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ಮನವಿ ಮಾಡಲಾಗಿದೆ. ಗ್ರಾ.ಪಂ.ಕಚೇರಿ ಕಟ್ಟಡಕ್ಕೆ ಈಗಾಗಲೇ ಜಾಗ ಮಂಜೂರುಗೊಂಡಿದ್ದು ನೂತನ ಗ್ರಾ.ಪಂ. ರಚನೆಗೆ ಕ್ರಮ ಕೈಗೊಳ್ಳುವಂತೆ ಯು.ಟಿ.ಖಾದರ್ ಅವರಿಗೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾದ ಪ್ರಜಲ, ವಾರಿಜಾಕ್ಷಿ, ವಿ.ಸಿ.ಜೋಸೆಫ್, ಗ್ರಾಮಸ್ಥರಾದ ಕೆ.ಎಸ್.ಅಬ್ದುಲ್ ರಜಾಕ್ ಸಮರಗುಂಡಿ, ಕೆ.ಎಂ.ಹನೀಫ್ ಕೋಲ್ಪೆ, ಕೆ.ಕೆ.ಇಸ್ಮಾಯಿಲ್ ಕೋಲ್ಪೆ, ಜಮಾಲ್ ಯು.ಕೆ., ಅಶ್ರಫ್ ಕೆ.ಪಿ., ಆಸೀಫ್ ಹೆಚ್., ರಫೀಕ್ ಕೋಲ್ಪೆ ಮತ್ತಿತರರು ಉಪಸ್ಥಿತರಿದ್ದರು.