ಪುಣಚ : ರಿಕ್ಷಾ ಪಲ್ಟಿ- ಚಾಲಕ ಜಗನ್ನಾಥ ಪೈಸಾರಿ ಮೃತ್ಯು

0

ಪುಣಚ : ಪುಣಚ ಪರಿಯಾಲ್ತಡ್ಕ ನಿವಾಸಿ ರಿಕ್ಷಾ ಚಾಲಕ ಜಗನ್ನಾಥ ಪೈಸಾರಿ ( ಜಗ್ಗಣ್ಣ) (57.ವ) ಜೂ. 13 ರಂದು ನಿಧನರಾಗಿದ್ದಾರೆ.


ಪುಣಚ ಪರಿಯಾಲ್ತಡ್ಕದಲ್ಲಿ ಸುಮಾರು 30 ವರ್ಷಗಳಿಂದ ರಿಕ್ಷಾ ಚಾಲಕರಾಗಿದ್ದು ಅವರು ತನ್ನ ಮನೆಯಿಂದ ಪಾರ್ಕಿಂಗ್ ಸ್ಥಳಕ್ಕೆ ಬರುವಾಗ ಇಳಿಜಾರು ರಸ್ತೆಯಲ್ಲಿ ದನ ಅಡ್ಡ ಬಂದ ಹಿನ್ನಲೆಯಲ್ಲಿ ರಿಕ್ಷಾ ಪಲ್ಟಿಯಾಗಿ ಬಿದ್ದ ಕಾರಣ ಚಾಲಕ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರೆನ್ನಲಾಗಿದೆ..


ತುಳು ನಾಟಕ ರಂಗದಲ್ಲಿ ಹಾಸ್ಯ ಅಭಿನಯದ ಮೂಲಕ ಮಿಂಚಿದ್ದ ಅವರು ಸುಮಾರು 30 ವರ್ಷಗಳಿಂದ ಆಟೋ ರಿಕ್ಷಾ ಚಾಲಕರಾಗಿ “ರಿಕ್ಷಾ ಜಗ್ಗಣ್ಣ” ಎಂದೇ ಚಿರಪರಿಚಿತರಾಗಿದ್ದರು.
ಮೃತರು ತಾಯಿ, ಸಹೋದರರು, ಪತ್ನಿ ಪೂರ್ಣಿಮಾ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here