ಪುತ್ತೂರು: ಪುತ್ತೂರು ಇನ್ನರ್‌ವೀಲ್ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ಶ್ರೀದೇವಿ ರೈ, ಕೋಶಾಧಿಕಾರಿಯಾಗಿ ಸೀಮಾ ನಾಗರಾಜ್‌ರವರು ಆಯ್ಕೆಗೊಂಡಿದ್ದಾರೆ.
ಕ್ಲಬ್‌ನ ಸಂಪಾದಕಿಯಾಗಿ ಸುಧಾ ಕಾರ್ಯಪ್ಪ, ISO ಆಗಿ ಆಶಾ ನಾಯಕ್, ವೆಬ್ ಕೋ-ಆರ್ಡಿನೇಟರ್ ಆಗಿ ವಚನಾ ಜಯರಾಮ್‌ರವರು ಆಯ್ಕೆಯಾಗಿರುತ್ತಾರೆ.
ನಿಕಟಪೂರ್ವ ಅಧ್ಯಕ್ಷೆಯಾಗಿ ಟೈನಿ ದೀಪಕ್, ಉಪಾಧ್ಯಕ್ಷೆಯಾಗಿ ರಾಜೇಶ್ವರಿ ಆಚಾರ್ ಹಾಗೂ ನಿರ್ದೇಶಕರುಗಳಾಗಿ ರಾಜೇಶ್ವರಿ ಬಲರಾಮ್, ರಮಾ ಪ್ರಭಾಕರ್, ಪುಷ್ಪಾ ಕೆದಿಲಾಯ, ವೈ. ವಿಜಯಲಕ್ಷ್ಮಿ ಶೆಣೈ ಮತ್ತು ವೀಣಾ ಬಿ.ಕೆರವರು ಆಯ್ಕೆಯಾಗಿರುತ್ತಾರೆ.
“ಶೈನ್ ಎ ಲೈಟ್” ಎನ್ನುವುದು ಇನ್ನರ್‌ವೀಲ್ ಕ್ಲಬ್‌ನ ಈ ವರ್ಷದ ಧ್ಯೇಯ ವಾಕ್ಯ. ಆರೋಗ್ಯ, ಸ್ವಚ್ಛತೆ, ಕಡಿಮೆ ಪೇಪರ್ ಬಳಕೆ, ಮಹಿಳಾ ಸಬಲೀಕರಣ, ಪರಿಸರ ಕಾಳಜಿ, ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ಹೀಗೆ ಹಲವಾರು ಯೋಜನೆಗಳು ಈ ಧ್ಯೇಯ ವಾಕ್ಯದಡಿ ಬರುತ್ತದೆ. ಕ್ಲಬ್‌ನ ಎಲ್ಲಾ ಸದಸ್ಯರುಗಳು ಇದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮಾಡಲಿದ್ದಾರೆ ಎಂದು ನಿಯೋಜಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಇವರು ತಿಳಿಸಿದ್ದಾರೆ.
ನಾಳೆ ಪದಗ್ರಹಣ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.15ರಂದು ಬೆಳಗ್ಗೆ 11ರಿಂದ ರೋಟರಿ ಮನೀಷಾ ಹಾಲ್‌ನಲ್ಲಿ ನಡೆಯಲಿದೆ. ಪದಗ್ರಹಣವನ್ನು ಜಿಲ್ಲಾ ISO ರಜನಿ ಭಟ್‌ರವರು ನಡೆಸಿಕೊಡಲಿದ್ದಾರೆ.