





ಪುತ್ತೂರು: ವಿಟ್ಲ ಹಾಗೂ ಉಪ್ಪಿನಂಗಡಿಯಲ್ಲಿ ಕಾರ್ಯಚರಿಸುತ್ತಿರುವ ನಾಡಕಚೇರಿಯಲ್ಲಿ ಮೂಲಭೂತ ವ್ಯವಸ್ಥೆಗಳಿಲ್ಲದೇ ಇರುವುದು ಸಾರ್ವಜನಿಕರಿಗೆ ತೊಂದರೆಯುಂಟಾಗಿದ್ದು ಈ ಎರಡೂ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಅನುದಾನ ನೀಡುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದರು. ವಿಟ್ಲ ಹಾಗೂ ಉಪ್ಪಿನಂಗಡಿ ನಾಡಕಚೇರಿಯಲ್ಲಿ ಶೌಚಾಲಯದ ಕೊರತೆ ಇದ್ದು ಅದನ್ನು ಶೀಘ್ರ ವ್ಯವಸ್ಥೆ ಮಾಡುವುದಾಗಿ ಸಚಿವರು, ಶಾಸಕರಿಗೆ ತಿಳಿಸಿದರು.


ಪುತ್ತೂರು ಗ್ರಾಮಚಾವಡಿ ನವೀಕರಣಕ್ಕೆ 50 ಲಕ್ಷ ರೂ ಅನುದಾನ
ಪುತ್ತೂರಿನ ಕೋರ್ಟು ರಸ್ತೆಯಲ್ಲಿರುವ ಗ್ರಾಮ ಚಾವಡಿ ಅತ್ಯಂತ ಹಳೆಯ ಕಟ್ಟಡವಾಗಿದ್ದು ಇದನ್ನು ನವೀಕರಣ ಮಾಡಲು 50 ಲಕ್ಷ ರೂ ಅನುದಾನ ಒದಗಿಸುವಂತೆ ಕಂದಾಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದರು. ಈ ಕಟ್ಟಡ ತುಂಬಾ ಹಳೆಯದಾಗಿದ್ದು ಪುತ್ತೂರು ತಾಲೂಕಿನ ಪ್ರಮುಖ ಗ್ರಾಮಚಾವಡಿ ಕೇಂದ್ರವೂ ಆಗಿರುತ್ತದೆ. ಈ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು ಯಾವುದೇ ಮೂಲಭೂತ ಸೌಕರ್ಯಗಳಿರುವುದಿಲ್ಲ. ಈ ಕಟ್ಟಡದ ನವೀಕರಣಕ್ಕೆ ಕಂದಾಯ ಇಲಾಖೆಯಿಂದ ಅನುದಾನವನ್ನು ಒದಗಿಸುವಂತೆಯೂ ಶಾಸಕರು ಮನವಿ ಮಾಡಿದರು.







 
            
