ಪುತ್ತೂರು: ಪುತ್ತೂರಿನ ಕಾಲೇಜ್ ವೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಭಯೋತ್ಪಾದನೆಯ ಕೃತ್ಯವನ್ನು ಶಾಲಾಡಳಿತ ಮಂಡಳಿ ವಿದ್ಯಾರ್ಥಿಗಳ ಮೂಲಕ ನಾಟಕ ಮಾಡಿಸಿದ್ದರು.
ಸೌಹಾರ್ದತೆ, ಸಹಬಾಳ್ವೆಯನ್ನು ಕಲಿಸಬೇಕಾದ ವಿದ್ಯಾ ಕೇಂದ್ರದಲ್ಲಿ ಪರಸ್ಪರ ದ್ವೇಷ, ಕೋಮು ಗಲಭೆಗೆ ಆಸ್ಪದ ಮಾಡುವ ಕೃತ್ಯವನ್ನು ನಡೆಸಲು ಪ್ರೇರೇಪಿಸಿದ ಶಾಲಾಡಳಿತ ಮಂಡಳಿಯ ನಡೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಆದರೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.