ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ‘ಶಾಲಾ ಸಂಸತ್ತು ‘ ಚುನಾವಣೆಯನ್ನು ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಜಯಂತಿ ಜೆ. ಹಾಗೂ ಹಿಂದಿ ಶಿಕ್ಷಕ ಲಿಂಗಪ್ಪ ಎನ್.ರವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಶಾಲಾ ನಾಯಕನಾಗಿ 10ನೇ ತರಗತಿಯ ಜಿತನ್ ಪಿ. ಹಾಗೂ ಉಪ ನಾಯಕಿಯಾಗಿ 9ನೇ ತರಗತಿಯ ಆಯಿಷಾ ತಝ್ಕೀಯ ಆಯ್ಕೆಯಾದರು. ಶಿಕ್ಷಣಮಂತ್ರಿಯಾಗಿ 10ನೇ ತರಗತಿಯ ಪ್ರಸ್ತುತ್ ಕೆ.ಎಂ., ಸಹಾಯಕ ಶಿಕ್ಷಣ ಮಂತ್ರಿಯಾಗಿ 9ನೇ ತರಗತಿಯ ಕುಮಾರ ಮತದಾನದ ಮೂಲಕ ಆಯ್ಕೆಯಾದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಗೃಹ ಸಚಿವರಾಗಿ 10ನೇ ತರಗತಿಯ ಶ್ರೇಯಸ್, ಸಾಂಸ್ಕೃತಿಕ ಸಚಿವರಾಗಿ ಲಕ್ಷಾ 10ನೇ ತರಗತಿ, ಸಹಾಯಕ ಸಾಂಸ್ಕೃತಿಕ ಸಚಿವರಾಗಿ ಆಯಿಷತ್ ಶಾಯಿಫಾ , ಸ್ವಚ್ಛತಾ ಸಚಿವರಾಗಿ ಸುಶಾಂತ್, ಸಹಾಯಕರಾಗಿ ಫಾತಿಮತ್ ಫಾಯಿಯ ಮತ್ತು ವಚನ್ ಆರೋಗ್ಯ ಸಚಿವರಾಗಿ ಫಾತಿಮತ್ ಫಾಯಿಝ ಸಹಾಯಕ ಮಂತ್ರಿಯಾಗಿ ಎನ್. ರಂಸೀನಾ, ಮಹಿಳಾ ಮಂತ್ರಿಯಾಗಿ ಕಾವ್ಯ, ಸಹಾಯಕ ಮಹಿಳಾ ಮಂತ್ರಿಯಾಗಿ ಸಹನಾ .ಎಸ್ ,ಕ್ರೀಡಾ ಮಂತ್ರಿಯಾಗಿ ಪ್ರತೀಕ್ ರಾಜ್, ಸಹಾಯಕ ಕ್ರೀಡಾ ಮಂತ್ರಿಯಾಗಿ ಜಿತೇಶ್, ನೀರಾವರಿ ಮಂತ್ರಿಯಾಗಿ ಶಶಾಂಕ .ಡಿ ,ಸಹಾಯಕ ನೀರಾವರಿ ಮಂತ್ರಿಯಾಗಿ ಸಂಪತ್ ಗೌಡ, ತೋಟಗಾರಿಕಾ ಮಂತ್ರಿಯಾಗಿ ಭಾರ್ಗವ, ಸಹಾಯಕ ತೋಟಗಾರಿಕೆ ಮಂತ್ರಿಯಾಗಿ ಶ್ರೀಶಕುಮಾರ್ ಅವರನ್ನು ನೇಮಕ ಮಾಡಲಾಯಿತು.
ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕರಾದ ದೀಪಾ. ಎಂ , ಗ್ರೇಸಿ ಡಿಸೋಜ, ನಿರ್ಮಲ ರೋಡ್ರಿಗಸ್ ಸಹಕಾರ ನೀಡಿದರು. ಹಿರಿಯ ಶಿಕ್ಷಕಿ ಧನಲಕ್ಷ್ಮಿ ಎಂ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಜಯಂತಿ ಜೆ ಮಂಡಲದ ಕಾರ್ಯಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು.