





ಉಪ್ಪಿನಂಗಡಿ: ಬಾವಿರಿಂಗ್ ನಿರ್ಮಾಣ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಚಳಿಜ್ವರದಿಂದ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಜೂ.16ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.


ಕೇರಳ ಕೊಲ್ಲಂ ನಿವಾಸಿ ರಾಜನ್(61ವ.)ಮೃತಪಟ್ಟವರಾಗಿದ್ದಾರೆ. ರಾಜನ್ ಅವರು ಉಪ್ಪಿನಂಗಡಿಯಲ್ಲಿ ಬಾವಿ ರಿಂಗ್ ನಿರ್ಮಾಣ ಕೆಲಸ ಮಾಡುತ್ತಿದ್ದ ಕಂಟ್ರಾಕ್ಟರ್ ಆಗಿರುವ ಕೊಲ್ಲಂನ ಬಾಬು ಎಂಬವರ ಜೊತೆ ಕೆಲಸ ಮಾಡುತ್ತಿದ್ದರು. ಅವರಿಗೆ ಜೂ.12ರಂದು ಚಳಿಜ್ವರ ಕಾಣಿಸಿಕೊಂಡಿದ್ದು ನಟ್ಟಿಬೈಲ್‌ನಲ್ಲಿರುವ ರೂಮ್‌ನಲ್ಲಿ ವಿಶ್ರಾಂತಿಯಲ್ಲಿದ್ದರು. ಜೂ.16ರಂದು ಬೆಳಿಗ್ಗೆ ಅಸ್ವಸ್ಥಗೊಂಡ ರಾಜನ್‌ರನ್ನು ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಅಜಯ್ ಮತ್ತು ಚಂದ್ರ ಎಂಬವರು ಚಿಕಿತ್ಸೆಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿ ಔಷಧಿಯನ್ನು ಪಡೆದುಕೊಂಡು ರೂಮಿಗೆ ಹೋಗಿದ್ದರು. ಮಧ್ಯಾಹ್ನ 12.20ರ ವೇಳೆಗೆ ಅವರಿಗೆ ಚಳಿಜ್ವರ ಜೋರಾಗಿದ್ದು, ವಾಪಾಸು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 1 ಗಂಟೆ ವೇಳೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿದ ವೇಳೆ ರಾಜನ್‌ರವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಪಿಕಪ್ ಚಾಲಕ ಶಿವಾನಂದ ಹರಿನಗರ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:174 CRPC ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.










