ಜೂ.19: ಸುಳ್ಯಪದವು ಹಾಲು ಉತ್ಪಾದಕ ಸೇವಾ ಸಹಕಾರಿ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

0

ಬಡಗನ್ನೂರುಃ ಸುಳ್ಯಪದವು  ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆಯು ಜು.1 ರಂದು ಸಂಘದ ಕಛೇರಿಯಲ್ಲಿ ನಡೆಯಲಿದ್ದು ಆಕಾಂಕ್ಷೆಯುಳ್ಲ ಅಭ್ಯರ್ಥಿಗಳು ಜೂ 19 ರಿಂದ ನಾಮ ಪತ್ರ ಸಲ್ಲಿಸಬಹುದಾಗಿದೆ.

ಬೆಳಗ್ಗೆ ಗಂ 9 ರಿಂದ 12.30 ರವರೆಗೆ ನಾಮ ಪತ್ರವನ್ನು ರಿಟರ್ನಿಂಗ್  ಆಫೀಸರ್ ಸಲ್ಲಿಸಬಹುದಾಗಿದೆ.ಜೂ 23 ರಂದು ನಾಮ ಪತ್ರ ಸಲ್ಲಿಕೆ ಕೊನೆಯ ದಿನವಾಗಿದ್ದು ಜೂ.24 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅದೇ ದಿನ ಅಭ್ಯರ್ಥಿಗಳ ಪಟ್ಟಿ ಅಂತಿಮ ಪ್ರಕಟಿಸಾಗುವುದು. ಜೂ 25 ರಂದು ನಾಮಪತ್ರ ಹಿಂತೆಗತಕ್ಕೆ ಅವಕಾಶವಿದ್ದು, ಅದೇ ದಿನ ಅಂತಿಮ ಕಣದಲ್ಲಿರುವ  ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ನಡೆಯಲಿದೆ. ಜೂ 25 ರಂದು ಸಿಂದುತ್ವ ಹೊಂದಿರುವ ಉಮೇದುದಾರರ  ಪಟ್ಟಿ ಪ್ರಕಟಿಸಲಾಗುತ್ತದೆ. ಜು 1 ರಂದು ಮತದಾನ ನಡೆಯಲಿದ್ದು ಅದೇ ದಿನ ಮತ ಎಣಿಕೆ ನಡೆಯಲಿದೆ ಒಟ್ಟು 13 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ  ಸಾಮಾನ್ಯ, 7, ಪ.ಜಾತಿ ಮೀಸಲು 1, ಪ.ಪಂಗಡ ಮೀಸಲು 1, ಹಿಂ ವರ್ಗ ಎ ಮೀಸಲು  1, ಹಿಂ ವರ್ಗ ಬಿ ಮೀಸಲು 1, ಮಹಿಳಾ ಮೀಸಲು ಸ್ಥಾನ 2 ಇರಲಿದೆ.ಎಂದು ರಿಟರ್ನಿಂಗ್ ಆಫೀಸರ್  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here