ಪುತ್ತೂರು: ಚಿಕ್ಕಪುತ್ತೂರು ನಿವಾಸಿ ಚೇತನ್ ಕುಮಾರ್ ಅವರ ಪತ್ನಿ ಪಿ.ಮಾಲತಿ(43ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂ. 18ರಂದು ನಿಧನರಾದರು.
ನೆಲ್ಲಿಕಟ್ಟೆ ಸ.ಹಿ.ಪ್ರಾ.ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಬಿಸಿಯೂಟ ತಯಾಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ನಿಧನರಾಗಿದ್ದಾರೆ. ಮೃತರು ಗಂಡ ಚೇತನ್ ಕುಮಾರ್, ಪುತ್ರಿ ವರ್ಷಾ ಅವರನ್ನು ಅಗಲಿದ್ದಾರೆ.