ಸೇವಾ ಸಂಸ್ಥೆಗಳ ವಿರುದ್ಧ ಸುಳ್ಳು ಆರೋಪ ಮಾಡಬೇಡಿ – ಕಲಿಯುಗ ಸೇವಾ ಸಮಿತಿ ಮನವಿ

0

ಪುತ್ತೂರು: ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಆಕಸ್ಮಿಕ ಮರಣಗಳಿಗೆ ನಡೆಸಲಾಗುತ್ತಿರುವ ಮರಣೋತ್ತರ ಶವ ಪರೀಕ್ಷೆ ಶವಗಾರ ನೌಕರರಿಗೆ ಕಡಿಮೆ ಸಂಬಳ ಇರುವುದು ನಮಗೆ ಬೇಸರ ಇದೆ. ಆದರೆ ಅವರು ಬಡವರಿಂದ ಶವಪರೀಕ್ಷೆಗೆ ಹಣ ಪಡೆಯುವುದು ಸರಿಯೇ ?. ಅದೂ ಅಲ್ಲದೆ ಈ ಕುರಿತು ಹಣ ಪಡೆದವರ ಪರ ಆರೋಗ್ಯಾಧಿಕಾರಿಯವರು ಮಾತನಾಡುವ ಮೂಲಕ ಲಂಚ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿರುವ ಸಂಸ್ಥೆ ನೈತಿಕ ಬಲ ಕಳೆದುಕೊಳ್ಳುವಂತಾಗಿದೆ. ಈ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳ ವಿರುದ್ಧ ಸುಳ್ಳು ಆರೋಪ ಮಾಡಬೇಡಿ ಎಂದು ಕಲಿಯುಗ ಸೇವಾ ಸಮಿತಿ ಕಾರ್ಯದರ್ಶಿ ಸಂಪತ್ ಕುಮಾರ್ ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಸರಕಾರಿ ಆಸ್ಪತ್ರೆಯಲ್ಲಿ ಮೇ.25 ಕ್ಕೆ ಬಡ ಕುಟುಂಬವೊಂದರ ಶವ ಪರೀಕ್ಷೆಗೆ ಶವಗಾರ ಕೆಲಸಗಾರರು ಹಣ ಕೇಳಿದ್ದಾರೆ. ಈ ಕುರಿತು ದಾಖಲೆಯೂ ಇದೆ. ನಾವು ಅವತ್ತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಶಾ ಮೆಡಂಗೆ ತಿಳಿಸಿದ್ದೆವು. ಅವರು ಇಂತಹ ದೂರ ಪದೇ ಪದೇ ಬರುತ್ತದೆ. ನೀವು ರೈಟಿಂಗ್‌ನಲ್ಲಿ ಕೊಡಿ ಎಂದರು. ಅದರಂತೆ ನಾವು ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಮತ್ತು ಶಾಸಕರಿಗೆ ದೂರು ನೀಡಿದ್ದೆವು. ಅದಲ್ಲದೆ ಬಡವರಿಂದ ಲಂಚ ಪಡೆದರೆ ಕೂಡಲೆ ತಿಳಿಸುವಂತೆ ಶಾಸಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ಆಸ್ಪತ್ರೆಯ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಹಣಪಡೆದಿರುವುದಕ್ಕೆ ಪ್ರೋತ್ಸಾಹ ನೀಡಿದಂತೆ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಬೇರೆ ಬೇರೆ ಕಚೇರಿಗಳಲ್ಲಿ ಹೊರಗುತ್ತಿಗೆ ನೌಕರರು ಕೂಡಾ ಅನಧಿಕೃತವಾಗಿ ಹಣ ತೆಗೆದುಕೊಳ್ಳುತ್ತಿದ್ದಾರೆಂಬಂತೆ ವ್ಯಕ್ತವಾಗುತ್ತದೆ. ನಾವು ದೂರು ಕೊಟ್ಟು ಬಹಳಷ್ಟು ಸಮಯ ಆಗಿತ್ತು. ಆದರೆ ನಮ್ಮನ್ನು ಆಸ್ಪತ್ರೆಯ ಮುಖ್ಯಾಧಿಕಾರಿ ಕರೆದು ಮಾತನಾಡಿಸುವ ಸೌಜನ್ಯತೆ ತೋರಿಲ್ಲ. ಇವೆಲ್ಲ ಲಂಚ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮಾಡುತ್ತಿರುವ ಹೋರಾಟಗಾರರು ನೈತಿಕ ಬಲ ಕಳೆದು ಕೊಳ್ಳುವಂತಾಗುತ್ತಿದೆ. ಆಸ್ಪತ್ರೆಯ ವೈದ್ಯರ ವಿರುದ್ಧವೂ ನಾವು ಎಲ್ಲೂ ದೂರು ನೀಡಿಲ್ಲ. ನಾವು ಮೇ 25ರಂದು ಮರಣೋತ್ತರ ಶವ ಪರೀಕ್ಷೆ ಮಾಡಲು ಬಂದ ನೌಕರರರ ವಿರುದ್ಧ ಮಾತ್ರ ದೂರು ನೀಡಿದ್ದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಿಯುಗ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಪ್ರಭು, ಜೊತೆ ಕಾರ್ಯದರ್ಶಿ ಸಂತೋಷ್ ಕುಮಾರ್, ಸುರೇಂದ್ರ ಪೂಜಾರಿ, ವೀರಪ್ಪ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here