ಪುತ್ತೂರು: ನೈತ್ತಾಡಿ ದಿ.ಜತ್ತಪ್ಪ ಗೌಡ ಅವರ ಉತ್ತರಕ್ರಿಯೆ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮ ಜೂ. 19ರಂದು ಕೆಮ್ಮಿಂಜೆ ಶ್ರೀ ಷಣ್ಮುಖ – ಮಹಾವಿಷ್ಣು ಸಭಾಭವನದಲ್ಲಿ ನಡೆಯಿತು.
ದಿ.ಜತ್ತಪ್ಪ ಗೌಡ ಅವರ ಭಾವ ನುಡಿನಮನ ಸಲ್ಲಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಸಹಿತ ಅನೇಕ ಮಂದಿ ಈ ಸಂದರ್ಭ ದಿ.ಜತ್ತಪ್ಪ ಗೌಡ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ದಿ.ಜತ್ತಪ್ಪ ಗೌಡ ಅವರ ತಾಯಿ ದುಗ್ಗಮ್ಮ, ದಿ.ಜತ್ತಪ್ಪ ಗೌಡರ ಪತ್ನಿ ಬೇಬಿ ರೇಖಾ, ಪುತ್ರರಾದ ಅಜಿತೇಶ್, ಅಶ್ವಿತ್, ಸಹೋದರ ಗಣೇಶ್ ನೈತ್ತಾಡಿ, ಸಹೋದರಿಯರಾದ ಸುಶೀಲಾ, ಯಶೋದಾ ಮತ್ತು ಕುಟುಂಬಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.