ಅಲ್ ಬಿರ್ರ್ ನವ ಪೀಳಿಗೆಯನ್ನು ಆಕರ್ಷಿಸುತ್ತಿದೆ-ಕುಂಬೋಳ್ ತಂಙಳ್
ಪುತ್ತೂರು : ಸಮಸ್ತ ಶಿಕ್ಷಣ ಮಂಡಳಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪುಟ್ಟ ಮಕ್ಕಳ ಪಾಠಶಾಲೆ ‘ಅಲ್ ಬಿರ್ರ್’ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಪುಟಾಣಿ ಮಕ್ಕಳಿಗೆ ಅವಶ್ಯಕ ವಾದ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಸಮನ್ವಯಿಸಿ ನೀಡುತ್ತಿದೆ. ಇಂದು ಇದು ನವಪೀಳಿಗೆಯನ್ನು ಅತ್ಯಧಿಕವಾಗಿ ಆಕರ್ಷಿಸುವ ವಿದ್ಯಾಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಹೇಳಿದರು.
ಅವರು ಪುತ್ತೂರು ಮುರ ಎಂ.ಪಿ.ಎಂ.ವಿದ್ಯಾಲಯದಲ್ಲಿ ‘ಅಲ್ ಬಿರ್ರ್’ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಕೇರಳದ ಸಮಸ್ತದ ಫಾಳಿಲಾ ಶೈಕ್ಷಣಿಕ ವಿಭಾಗದ ಪ್ರತಿನಿಧಿಗಳಾದ ವಿ.ಟಿ.ಸಿ ಉಮರ್ ಮೌಲವಿ, ಆಲಿ ಪರಂಬು ಉಸ್ತಾದ್, ಶರೀಫ್ ದಾರಿಮಿ ಕೋಟಯಂ ಮಾತನಾಡಿ ‘ಸಮಸ್ತ’ದ ಅಧೀನದಲ್ಲಿ ಎಳೆಯ ಮಕ್ಕಳಿಗಾಗಿ ಅಲ್ ಬಿರ್ರ್ ಎಂಬ ಶಿಕ್ಷಣ ವ್ಯವಸ್ಥೆಗೆ ರೂಪು ನೀಡಿಲಾಗಿದ್ದು, ಇಂದು ಇದು ಅತ್ಯಂತ ವೇಗವಾಗಿ ಮಕ್ಕಳನ್ನು ಶಿಕ್ಷಣಕ್ಕೆ ಸೆಳೆಯುತ್ತಿದ್ದು, ಈಗಾಗಲೇ ಮುನ್ನೂರಕ್ಕೂ ಮಿಕ್ಕ ಕೇಂದ್ರಗಳಲ್ಲಿ ಈ ಶೈಕ್ಷಣಿಕ ಸಂಸ್ಥೆ ಕಾರ್ಯಾಚರಿಸುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಎಂ.ಪಿ.ಎಂ.ವಿದ್ಯಾಲಯದ ಅಧ್ಯಕ್ಷ ಅಡ್ವಕೇಟ್ ಎಂ.ಪಿ.ಅಬೂಬಕ್ಕರ್ ವಹಿಸಿದ್ದರು. ಶುಕೂರ್ ದಾರಿಮಿ ಕರಾಯ, ಪುತ್ತು ಹಾಜಿ ಭಾರತ್ ಲೈಮ್, ಶಕೂರ್ ಹಾಜಿ ಕಲ್ಲೇಗ, ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಪುತ್ತೂರು, ಅಬ್ದುಲ್ ಹಮೀದ್ ಹಾಜಿ ಲವ್ಲಿ ಬಪ್ಪಳಿಗೆ, ಇಬ್ರಾಹಿಂ ಹಾಜಿ ರಾಜ್‌ಕಮಾಲ್ ಕೊಡಾಜೆ, ಹನೀಫ್ ಹಾಜಿ ಕಲ್ಲೇಗ, ಅಬ್ದುಲ್ ಹಮೀದ್ ಸಾಲ್ಮರ, ಯೂಸುಫ್ ತಾರಿಗುಡ್ಡೆ, ಇಬ್ರಾಹಿಂ ಕಡವ, ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಕೆ.ಎಂ.ಎ.ಕೊಡುಂಗಾಯಿ ಮೊದಲಾದವರು ಉಪಸ್ಥಿತರಿದ್ದರು. ಮುಫತ್ತಿಷ್ ಉಮರ್ ದಾರಿಮಿ ಸ್ವಾಗತಿಸಿ ಕೊ-ಓರ್ಡಿನೇಟರ್ ಅಬ್ದುರ್ ರಶೀದ್ ಹಾಜಿ ಪರ್ಲಡ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.ಸಂಸ್ಥೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.