ಕಡಬ: ಬಿಳಿನೆಲೆ ಗ್ರಾಮದ ಎರ್ಮಾಯಿಲ್ ದಿ. ಜನಾರ್ಧನ ಗೌಡ ಹಾಗೂ ಅಮ್ಮಯ್ಯ ಎ. ಇವರ ಪುತ್ರಿ ಗೀತಾ ಎ ಜೆ ಮಂಡಿಸಿರುವ ಇನ್ಸ್ಟಿಟ್ಯೂಷನಲ್ ಸೋಷಿಯಲ್ ರೆಸ್ಪಾನಿಬಿಲಿಟಿ ಆಸ್ ಎ ಪಿಆರ್ ಟೂಲ್ ಇನ್ ಹೈಯರ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್, ಎ ಸ್ಟಡೀ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಎನ್ನುವ ಪ್ರಬಂದಕ್ಕೆ ಕುವೆಂಪು ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿ ಪ್ರಧಾನ ಮಾಡಿದೆ.
ಇವರು ಕುವೆಂಪು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್. ಸತ್ಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಪ್ರಸ್ತುತ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ನಿವಾಸಿಯಾಗಿರುವ ಇವರು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವನ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಇದ್ದಾರೆ. ಈಗಾಗಲೇ ಹಲವಾರು ರಾಷ್ಟ್ರಿಯ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದು, ಸುಮಾರು ಎಂಟು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಕಿತ್ತೂರು ಚೆನ್ನಮ್ಮ ವಿಶ್ವವಿದ್ಯಾನಿಲಯದ ಬಿ.ಎ. ಕನ್ನಡ ಪಠ್ಯದಲ್ಲಿ ಇವರು ಬರೆದ ಆನ್ ಲೈನ್ ಶಿಕ್ಷಣ ಕುರಿತ ಲೇಖನ ಪಠ್ಯವಾಗಿ ಪ್ರಕಟವಾಗಿದೆ. ಹವ್ಯಾಸಿ ಬರಹಗಾರರೂ ಆಗಿರುವ ಇವರು ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಹಾಗೂ ಕೆ ಎಸ್ ಎಸ್ ಕಾಲೇಜಿನ ಪೂರ್ವವಿದ್ಯಾರ್ಥಿನಿ.