ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ

0

ಈಶ್ವರಮಂಗಲ : ಈಶ್ವರಮಂಗಲ ಶ್ರೀ ಗಜಾನನ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಜೂನ್ 21 ರಂದು ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಎಸ್.ಜಿ.ಎಂ ಪ್ರೌಢ ಶಾಲೆ ಸರ್ವೆ ಇಲ್ಲಿಯ ನಿವೃತ್ತ ದೈಹಿಕ ಶಿಕ್ಷಕರು ಮತ್ತು ಮುಖ್ಯಗುರು ದೀಪ ಪ್ರಜ್ವಲನೆಯ ಮೂಲಕ ಕಾರ್‍ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ಯೋಗ ಎಂಬುದು ಬಹಳ ಅಗತ್ಯವಾದುದು, ನಿರಂತರ ಯೋಗಾಭ್ಯಾಸದಿಂದ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ಯೋಗದ ಮಹತ್ವವನ್ನು ತಿಳಿಸಿದರು.

ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ ಯೋಗ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸುತ್ತಿರುವುದರ ಹಿನ್ನಲೆಯನ್ನು ತಿಳಿಸಿದರು. ಶಿಕ್ಷಕಿ ರಕ್ಷಿತ ಮಾತನಾಡಿ ವಿದ್ಯಾರ್ಥಿಗಳು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶಾಲಾ ಸಂಚಾಲಕ ಶಿವರಾಮ ಪಿ, ಪ್ರಾಂಶುಪಾಲರಾದ ಕೆ ಶಾಮಣ್ಣ, ಮುಖ್ಯಗುರು ಅಮರನಾಥ ಬಿ ಪಿ ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರಸಾದ್ ಕುಮಾರ್, ರಕ್ಷಿತಾ ಮತ್ತು ಸೌಮ್ಯಶ್ರೀ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ವಿದ್ಯಾರ್ಥಿನಿಯರಾದ ರಿಯಾ ಬಿನಾಯ್, ಸೃಷ್ಟಿ, ಋತ್ವಿಕ ಪ್ರಾರ್ಥಿಸಿ, ಶ್ರೀಯ ಸ್ವಾಗತಿಸಿದರು ಮತ್ತು ತಶ್ವಿ ವಂದಿಸಿದರು.ಅನಾಮಿಕ ಕಾರ್‍ಯಕ್ರಮವನ್ನು ನಿರೂಪಿದರು.

LEAVE A REPLY

Please enter your comment!
Please enter your name here