ಪುತ್ತೂರು: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಜೂ.21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಪ್ಲೇವಿ ಲೋಬೊ ಮಾತನಾಡಿ ಯೋಗಕ್ಕಾಗಿ ದಿನನಿತ್ಯ ಸ್ವಲ್ಪ ಸಮಯವನ್ನು ಮೀಸಲಿಟ್ಟು ಯೋಗವನ್ನು ಮಾಡುವುದರಿಂದ ಏಕಾಗ್ರತೆಯೊಂದಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚುತ್ತದೆ ಹಾಗೂ ಒಳ್ಳೆಯ ಆರೋಗ್ಯವಂತರಾಗಿ ಜೀವಿಸಲು ಸಾಧ್ಯ ಎಂಬ ಸಲಹೆಯನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷಜೆರಾಲ್ಡ್ ಡಿಕೋಸ್ಟ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಯೋಗ ದಿನದ ಮಹತ್ವವನ್ನು ಕುರಿತು ಮಾತನಾಡಿದರು. ಹುಝೈಫ ಯೋಗ ದಿನದ ಮಹತ್ವವನ್ನು ತಿಳಿಸಿದರು. ರಿಹಾನರವರು ಸ್ವಾಗತಿಸಿ, ಅಂಜಲಿ ಮರಿಯ ವಂದಿಸಿ, ಅಲಿನಾ ಕ್ರಿಸ್ಟಿನ್ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲಾ ಶಿಕ್ಷಕ-ಶಿಕ್ಷಕೇತರ ಬಂಧುಗಳು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.