ಪ್ರಿಯದರ್ಶಿನಿಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆ

0

ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸುಮಾರು 450 ವಿದ್ಯಾರ್ಥಿಗಳು ಹಾಗೂ 20 ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಶಾಲಾ ಆವರಣದಲ್ಲಿ ವಿವಿಧ ಆಸನ ಪ್ರಾಣಾಯಾಮಗಳಲ್ಲಿ ದೈಹಿಕ ಕಸರತ್ತುಗಳನ್ನು ನಡೆಸಿದರು.

ಶಾಲಾ ಮುಖ್ಯಗುರು ರಾಜೇಶ್ ಎನ್. ಯೋಗದ ಮಹತ್ವದ ಬಗ್ಗೆ ಹೇಳಿ ‘ವಿದ್ಯಾರ್ಥಿಗಳಿಗೆ ಯೋಗವು ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವ ಸುಲಭ ಸಾಧನ. ವಿವಿಧ ಆಸನಗಳು ಶಕ್ತಿ, ನಮ್ಯತೆ ಮತ್ತು ಆತ್ಮವಿಶ್ವಾಸವನ್ನು ಅಭಿವೃದ್ಧಿಪಡಿಸುವಲ್ಲಿ ಸಹಕರಿಸುವುದು. ವಸುದೈವ ಕುಟುಂಬಕಮ್ ಎಂಬ ಉಪನಿಷತ್ತಿನ ನುಡಿಗಟ್ಟಿನಂತೆ ಈ ಯೋಗ ದಿನಾಚರಣೆಯು ಎಲ್ಲರ ಬಾಳಿಗೆ ಆರೋಗ್ಯದೀಪವಾಗಲಿ’ ಎಂದು ಶುಭ ಹಾರೈಸಿದರು. ಯೋಗ ಶಿಕ್ಷಕಿ ಶ್ರೀಮತಿ ಗೌತಮಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here