ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಬೆಳಿಯಪ್ಪ ಗೌಡ ಪುತ್ರ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡು ಶಾಖಾ ವ್ಯವಸ್ಥಾಪಕ ಜಯರಾಮ ಗೌಡ(38ವ.)ರವರು ಅಸೌಖ್ಯದಿಂದ ಜೂ.22 ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
2011ರಲ್ಲಿ ಸಹಕಾರ ಸಂಘಕ್ಕೆ ನೇಮಕಗೊಂಡಿದ್ದ ಜಯರಾಮ ಗೌಡರವರು 2018ರಲ್ಲಿ ಪಾಲ್ತಾಡು ಶಾಖಾ ವ್ಯವಸ್ಥಾಪಕರಾಗಿ ನಿಯುಕ್ತಿಗೊಂಡಿದ್ದರು. ಅನಾರೋಗ್ಯದ ಹೊರತಾಗಿಯೂ ಅವರು ಕಳೆದ ಒಂದು ವರ್ಷದಿಂದ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ಕೊಳ್ತಿಗೆ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ, ಸಕ್ರೀಯ ಸದಸ್ಯರಾಗಿ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದರು.
ಅವಿವಾಹಿತರಾಗಿರುವ ಇವರು ತಂದೆ ಬೆಳಿಯಪ್ಪ ಗೌಡ, ತಾಯಿ ತಾರಾವತಿ, ಸಹೋದರರಾದ ಗುರುಪ್ರಸಾದ್, ಪೊಲೀಸ್ ಸಿಬ್ಬಂದಿ ಹರಿಪ್ರಸಾದ್, ನಾದಿನಿಯರಾದ ವನಿತಾ ಹಾಗೂ ಶ್ರೀದೇವಿಯವರನ್ನು ಅಗಲಿದ್ದಾರೆ.
ಇಂದು (ಜೂ.22)ಸಹಕಾರ ಸಂಘಕ್ಕೆ ರಜೆ
ಮೃತರ ಗೌರವಾರ್ಥವಾಗಿ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜೂ.22ರಂದು ರಜೆ ಸಾರಲಾಗಿದೆ.
ಅಂಗಡಿ, ಮುಂಗಟ್ಟುಗಳು ಬಂದ್:
ಮೃತರ ಗೌರವಾರ್ಥವಾಗಿ ಪೆರ್ಲಂಪಾಡಿಯ ಎಲ್ಲಾ ವರ್ತಕರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಿದರು.
ಸಂಘದ ಆವರಣದಲ್ಲಿ ಅಂತಿಮ ದರ್ಶನ:
ಸಾರ್ವಜನಿಕರಿಗೆ ಮೃತ ದೇಹದ ಅಂತಿಮ ದರ್ಶನಕ್ಕಾಗಿ ಸಹಕಾರಿ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಬಳಿಕ ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರಗಳು ನಡೆಯಲಿದೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.