ಪುತ್ತೂರು: ನಗರಸಭೆ ವ್ಯಾಪ್ತಿಯ 19/21 ರ ವಾರ್ಡ್ ವ್ಯಾಪ್ತಿಗೊಳಪಟ್ಟ ಪರ್ಲಡ್ಕ ಸರಕಾರಿ ಶಾಲಾ ಬಳಿ ಮುಖ್ಯರಸ್ತೆಯ ಒಂದು ಭಾಗದಲ್ಲಿ ಹೊಂಡ ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಈ ಕುರಿತು ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಈ ಭಾಗದ ರಸ್ತೆಯ ಒಂದು ಭಾಗದಲ್ಲಿ ನೀರು ನಿಂತು ಹೊಂಡ ನಿರ್ಮಾಣವಾಗಿದೆ ಇದು ದ್ವಿ ಚಕ್ರದ ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.ಈಗಾಗಲೇ ಕೆಲವು ಧ್ವಿಚಕ್ರ ವಾಹನ ಸವಾರರು ವಾಹನದೊಂದಿಗೆ ಹೊಂಡಕ್ಕೆ ಬಿದ್ದು ಆಳ ತಿಳಿದು ತಮ್ಮ ಪಾಡಿಗೆ ಎದ್ದು ಹೋಗಿದ್ದಾರೆ.ವಾಹನ ದಟ್ಟನೆ ಇರುವ ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ನಡೆದು ಹೋಗುತ್ತಿದ್ದು, ತಿರುವಿನಲ್ಲಿರುವ ಹೊಂಡವನ್ನು ತಪ್ಪಿಸುವ ಪ್ರಯತ್ನದಲ್ಲಿ ಧ್ವಿಚಕ್ರ ವಾಹನ ಸವಾರರಿಂದ ಮಕ್ಕಳಿಗೆ ಅಪಾಯವಾಗುವ ಸಂಭವ ಇದೆ. ಇದೇ ರಸ್ತೆಯಲ್ಲಿ ಸಹಾಯಕ ಕಮೀಷನರ್, ತಹಶಿಲ್ದಾರ್, ಪೊಲೀಸ್ ಇಲಾಖೆಯ ಅಧಿಕಾರಿಯವರು ಪ್ರತಿ ದಿನ ನಾಲ್ಕೈದು ಬಾರಿ ವಾಹನದಲ್ಲಿ ಸಂಚರಿಸುವ ರಸ್ತೆಯಾಗಿದೆ. ಹಾಗಾಗಿ ಮುಂದೆ ಅನಾಹುತ ನಡೆಯದಂತೆ ಮುನ್ನೆಚ್ಚೆರಿಕೆ ಕ್ರಮವಾಗಿ ರಸ್ತೆಹೊಂಡವನ್ನು ದುರಸ್ಥಿಪಡಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.