ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಕೆಎಂಎಫ್ ಪಶುವೈದ್ಯಾಧಿಕಾರಿಗಳ ಭೇಟಿ

0

‘ಕರು ಪೋಷಣೆ’ ಯೋಜನೆ

ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರದ ಪಶುಪಾಲನೆಯನ್ನು ವೀಕ್ಷಿಸುವ ಸಲುವಾಗಿ ಕೆಎಂಎಫ್ ಉಪವ್ಯವಸ್ಥಾಪಕ, ಪಶುವೈದ್ಯಾಧಿಕಾರಿ ಡಾ. ಸತೀಶ್ ರಾವ್, ಪಶು ವೈದ್ಯರಾದ ಡಾ. ಅನುದೀಪ್ ಮತ್ತು ಕೃತಕ ಗರ್ಭಧಾರಣಾ ತಜ್ಞ ಎಂಡೆಸಾಗು ಸೂರ್ಯಪ್ರಸನ್ನ ರೈ ರವರು ಜೂ.20 ರಂದು ಭೇಟಿ ನೀಡಿದರು. 

ದನದ ಕರುವಿನ 15 ತಿಂಗಳು ಅಂದರೆ ಗರ್ಭಧಾರಣೆಯ ಅವಧಿಯವರೆಗೆ ಕರುಗಳ ಪಾಲನೆ ಮಾಡುವ ವಿಶೇಷ ಯೋಜನೆಯ ಬಗ್ಗೆ ಇದೇ ವೇಳೆ ಮಾಹಿತಿ ನೀಡಿದರು. ಕರುಗಳಿಗೆ ಆರಂಭದಿಂದಲೇ ಪೌಷ್ಟಿಕ ಆಹಾರ ದೊರೆತು ಗರ್ಭಧಾರಣೆ ಮತ್ತು ನಂತರ ಯಾವುದೇ ರೋಗ ರುಜಿನಗಳಿಗೆ ಬಾಧಿಸದಂತೆ ಸಂರಕ್ಷಿಸುವ‌ ನಿಟ್ಟಿನಲ್ಲಿ ಕರುವಿನ ಪೋಷಣೆಯ ಯೋಜನೆ ತರಲಾಗಿದೆ. ಹೈನುಗಾರರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಪಶುಪಾಲನೆಯಲ್ಲಿ ಕಡಮಜಲು ಸುಭಾಸ್ ರೈಯವರು ಅನುಸರಿಸುತ್ತಿರುವ ವೈಜ್ಞಾನಿಕ ವಿಧಾನಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಡಮಜಲು ಸುಭಾಸ್ ರೈ ದಂಪತಿ ವೈದ್ಯಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here