ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ವಿವಿಧ ಸೋಲಾರ್ ಲೈಟ್, ಸೋಲಾರ್ ಹೀಟರ್, ಸೋಲಾರ್ ಪಂಪ್ ಸೆಟ್, ಸೋಲಾರ್ ಆಫ್ ಗ್ರೀಡ್, ಸೋಲಾರ್ ಆನ್ ಗ್ರೀಡ್, ಹೈಬ್ರೀಡ್, ಇನ್ವರ್ಟರ್ ಗಳ ಖರ್ಚು ವೆಚ್ಚ ಪ್ರಯೋಜನಗಳ ಬಗ್ಗೆ ಮಾಹಿತಿ ಕಾರ್ಯಗಾರ ಜೂನ್ 25ರಂದು ನಡೆಯಿತು.
ಕಾರ್ಯಾಗಾರವನ್ನು ಸೋಲಾರ್ ಎನರ್ಜಿ ವಿವಿಧ ಉಪಯುಕ್ತ ಸಿಸ್ಟಮ್‌ಗಳ ತಜ್ಞ ಎಂದು ಪರಿಗಣಿಸಲ್ಪಟ್ಟಿರುವ ಉಮೇಶ್ ರೈ ಕೈಕಾರ ನಡೆಸಿಕೊಟ್ಟರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ. ಶಿವಾನಂದರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಗಾರದಲ್ಲಿ ಜಯಚಂದ್ರ ರೈ ಕಡಬ, ಕೆ.ಎಸ್.ಎನ್. ಭಟ್ ನೇರಳಕಟ್ಟೆ, ಕೃಷ್ಣ ಕಿಶೋರ್ ನೇರಳಕಟ್ಟೆ, ಅಶ್ವಿನ್ ಬೆಳ್ತಂಗಡಿ, ವೆಂಕಪ್ಪ ನಾಯ್ಕ ಬೆಟ್ಟಂಪಾಡಿ, ಲೋಕೇಶ್ ಪಾಣಾಜೆ, ಪ್ರಸನ್ನ ಶಂಕರ್ ಬೆಳ್ಳಾರೆ, ಪ್ರಕಾಶ್ ಧರ್ಮಸ್ಥಳ, ಪ್ರವೇಶ್ ಕೌಡಿಚ್ಚಾರ್, ಸೋಮಪ್ಪ ಗೌಡ ಕೇಪುಳು, ಕವಿತಾ ಆರ್ಲಪದವು, ಗೋಪಾಲಕೃಷ್ಣ ಬುಡೋಳಿ, ಶುಭದ ಬುಡೋಳಿ, ಶೈಲೇಶ್ ಪುತ್ತೂರು, ಬಾಲಕೃಷ್ಣ ರೈ ದರ್ಬೆ, ಚಂದ್ರಶೇಖರ್ ಆಳ್ವ ಪಡುಮಲೆ, ಜಯಲಲಿತಾ ರೈ ಬೆದ್ರಾಳ, ಸಂಪತ್‌ಕುಮಾರ್ ಬೆಳ್ತಂಗಡಿ, ರಾಮಕೃಷ್ಣ ಭಟ್ ಚಂದುಕುಡ್ಲು, ಮೋಹನ್ ಎಂ ಪುತ್ತೂರು, ದಿವಾಕರ ಶೆಟ್ಟಿ ಬೆಳ್ತಂಗಡಿ, ಸಿಇಓ ಸೃಜನ್ ಊರುಬೈಲು, ಸುದ್ದಿ ಪ್ರತಿನಿಧಿಗಳಾದ ಸದಾಶಿವ ಆಲಂಕಾರು, ರಮೇಶ್ ಕೆಮ್ಮಾಯಿ, ಸಿಬ್ಬಂದಿಗಳಾದ ರಾಜೇಶ್ ಎಂ.ಎಸ್., ಶಿವಕುಮಾರ್ ಈಶ್ವರಮಂಗಲ, ಕುಶಾಲಪ್ಪ ಗೌಡ ಅಗಳಿ, ಪ್ರಜ್ವಲ್ ಬೇಕಲ್, ಸುದ್ದಿ ಕೃಷಿ ವಿಭಾಗದ ಪ್ರಚಲಿತ ಬಡಾವು, ಸುಳ್ಯ ಸುದ್ದಿ ಬಳಗ ಶಿವಪ್ರಸಾದ್ ಅಲೆಟ್ಟಿ, ಎಂ.ಎಂ. ಹಸೈನಾರ್ ಸುಳ್ಯ, ರಮ್ಯ ಸುಳ್ಯ, ಶರೀಫ್ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.