ಪುತ್ತೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು,ಗ್ರಾಮ ಪಂಚಾಯತ್ ಕೊಳ್ತಿಗೆ,ಶ್ರೀ ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ ಇವರ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ “ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ”ಅಭಿಯಾನದ ಅಂಗವಾಗಿ “ಗ್ರಾಮ ಸಾಹಿತ್ಯ ಸಂಭ್ರಮ-2023ರ,ಸರಣಿ ಕಾರ್ಯಕ್ರಮ ಜೂ.24ರಂದು ಶ್ರೀ ಷಣ್ಮುಖದೇವ ಪ್ರೌಢ ಶಾಲೆ ಪೆರ್ಲಂಪಾಡಿ “ಮೊಗಪ್ಪೆ ಎನ್.ಈಶ್ವರ ಭಟ್ ವೇದಿಕೆಯಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮ ವೈವಿಧ್ಯತೆಗಳೊಂದಿಗೆ ನಡೆಯಿತು.
ಪೂರ್ವಾಹ್ನ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ “ದ.ಕ.ಜೇನು ವ್ಯವಸಾಯಗಾರ ಸಹಕಾರಿ ಸಂಘ,ಮಾಧುರಿ ಸೌಧ ಪುತ್ತೂರು ಇದರ ಪ್ರಕಾಶನದಲ್ಲಿ ಪ್ರಕಟವಾಗುತ್ತಿರುವ “ಮಧುಪ್ರಪಂಚ ಕನ್ನಡ ತ್ರೈಮಾಸಿಕ, ಜುಲೈ,ಆಗಸ್ಟ್,ಸಪ್ಟಂಬರ್ -2023ರ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮ ಸುಂದರ ರೈ ಕೆರೆಮೂಲೆ, ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಸಮಸ್ತ ದ.ಕ.ಜೇನು ವ್ಯವಸಾಯಗಾರ ಸಹಕಾರಿ ಸಂಘ ಮತ್ತು ಸಂಪಾದಕ ಮಂಡಳಿಯ ಪರವಾಗಿ ಕನ್ನಡದ ಶಾಲು ಹೊದಿಸಿ ಗೌರವಿಸಿ ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪೆರ್ಲಂಪಾಡಿ ಶ್ರೀ ಷಣ್ಮುಖ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ತೀರ್ಥಾನಂದ ದುಗ್ಗಳ,ಪ್ರಗತಿಪರ ಹಿರಿಯ ಕೃಷಿಕ, ವಸಂತ ಕುಮಾರ್ ರೈ ದುಗ್ಗಳ,ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ,ಶಾಲಾ ಮುಖ್ಯ ಗುರು ಕೃಷ್ಣವೇಣಿ ಭಟ್ ಹಾಗೂ ಕಾರ್ಯಕ್ರಮದ ಸಂಯೋಜಕಿ ಪೂರ್ಣಿಮಾ ಪೆರ್ಲಂಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.