ಬಜತ್ತೂರು: ಗ್ರಾಮ ವಿಕಾಸ ಸಂಘದ ದಶಮಾನೋತ್ಸವ, ಉಚಿತ ದಂತ ಚಿಕಿತ್ಸಾ ಶಿಬಿರ

0

ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಪಡ್ಪು-ಮುದ್ಯ ಗ್ರಾಮ ವಿಕಾಸ ಸಂಘದ ದಶಮಾನೋತ್ಸವ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರ ಜೂ.25ರಂದು ಮುದ್ಯ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.


ಗ್ರಾಮ ವಿಕಾಸ ಸಂಘದ ಅಧ್ಯಕ್ಷ ಸಂಜೀವ ಗೌಡ ನಡುವಡ್ಕ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ಉದ್ಘಾಟಿಸಿದ ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ.ಅವರು ಮಾತನಾಡಿ, ನಮ್ಮ ದೇಹದಲ್ಲಿ ಬಾಯಿಯೇ ಮೊದಲ ಅಂಗ. ಬಾಯಿ ಸರಿ ಇದ್ದರೆ ಜೀವನವೂ ಚಂದ. ಆದ್ದರಿಂದ ಎಲ್ಲರೂ ಬಾಯಿಯ ಹಲ್ಲುಗಳನ್ನು ಸುರಕ್ಷತೆಯಿಂದ ರಕ್ಷಿಸಿಕೊಳ್ಳಿ ಎಂದರು.


ಮುಖ್ಯ ಅತಿಥಿಯಾಗಿದ್ದ ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ಜಯಂತ್‌ ಮಾತನಾಡಿ, ಕೆವಿಜಿ ವತಿಯಿಂದ ಆರೋಗ್ಯ ಶಿಬಿರಗಳು ಹಲವು ಕಡೆಗಳಲ್ಲಿ ಆಯೋಜಿಸಲಾಗುತ್ತಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರು ಇಂತಹ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ವಳಾಲು ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಚಕ್ರಪಾಣಿಯವರು ಮಾತನಾಡಿ, ಮುದ್ಯ ಗ್ರಾಮ ವಿಕಾಸ ಸಂಘವು ವಿದ್ಯಾರ್ಥಿಗಳಿಗೆ ಮತ್ತು ಶಾಲೆಗಳಿಗೆ ಆರ್ಥಿಕ ನೆರವು ನೀಡಿದೆ. ಈ ಸಂಘವು ಗ್ರಾಮಕ್ಕೆ ಮಾದರಿ ಸಂಘವಾಗಿದೆ ಎಂದರು.


ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನಂತಕೃಷ್ಣ ಉಡುಪ ಅವರು ಸನ್ಮಾನ ನಡೆಸಿಕೊಟ್ಟರು. ದಾಮೋದರ ಗೌಡ ಶೇಡಿಗುತ್ತು, ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೋಮಸುಂದರ ಕೊಡಿಪಾನ, ಶ್ರೀಮತಿ ಸುವರ್ಣಲತಾ ಪಡಿವಾಳ್ ಬಾರಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಶ್ರೀಮತಿ ಬೇಬಿ ಮುದ್ಯ ಶುಭಹಾರೈಸಿದರು. ಸಂಘದ ಸ್ಥಾಪಕ ಸದಸ್ಯರೂ, ಬಜತ್ತೂರು ಗ್ರಾ.ಪಂ.ಸದಸ್ಯರೂ ಆದ ಉಮೇಶ್ ಓಡ್ರಪಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ವಿಕಾಸ ಸಂಘದ ಸ್ಥಾಪಕ ಅಧ್ಯಕ್ಷ ಗೋಪಾಲ ವಳಾಲುದಡ್ಡು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ವಸಂತ ಗುಡ್ಡೆತ್ತಡ್ಕ ವರದಿ ವಾಚಿಸಿದರು. ಜಗದೀಶ್ ಉಪಾಧ್ಯಾಯ ಬಾರಿಕೆ ನಿರೂಪಿಸಿದರು. ಚೈತನ್ಯ ಬಾರಿಕೆ ಪ್ರಾರ್ಥಿಸಿದರು.

ಶ್ರೀ ಕ್ಷೇ.ಧ.ಗ್ರಾ.ಯೋಜನೆ ವಳಾಲು ಒಕ್ಕೂಟದ ಅಧ್ಯಕ್ಷ ಮಹೇಂದ್ರ ವರ್ಮ, ನಾರಾಯಣ ಕೆಳಗಿನಮನೆ, ವಳಾಲು ಹಾ.ಉ.ಸ.ಸಂಘದ ಅಧ್ಯಕ್ಷ ವಸಂತ ಗೌಡ ಪಿಜಕ್ಕಳ, ಮುದ್ಯ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಗೀತಾ ಮುದ್ಯ, ಕಾಂಚನ ನಡ್ಪ ದೇವಸ್ಥಾನದ ಟ್ರಸ್ಟ್‌ನ ಸದಸ್ಯರಾದ ದುಗ್ಗಪ್ಪ ಗೌಡ ಅಗರ್ತಿಮಾರು, ಬಜತ್ತೂರು ಗ್ರಾ.ಪಂ.ಮಾಜಿ ಸದಸ್ಯ ಮಾಧವ ಒರುಂಬೋಡಿ, ಸಂಘದ ಪ್ರಧಾನ ಕಾರ್ಯದರ್ಶಿ ಮಾಧವ ಬಾರಿಕೆ ಕೆಎಸ್‌ಆರ್‌ಟಿಸಿ, ಶೇಖರ ಗೌಡ ಬಾರಿಕೆ, ಶಶಿಧರ ಮುದ್ಯ, ಸಚಿನ್ ಮುದ್ಯ, ಪೂವಪ್ಪ ನಾಯ್ಕ್ ನಂಜಳಿ, ಸುರೇಶ್ ನಂಜಳಿ, ಕೇಶವ ಗಡ್ಡೆತ್ತಡ್ಕ, ಸುಂದರ ಗೌಡ ಪುಣ್ಕೆತ್ತಡಿ, ವಾಸು ದಡ್ಡು, ಅರ್ಚಕರಾದ ಕೃಷ್ಣಪ್ರಸಾದ್ ಉಡುಪ, ಸಂಘದ ಮಾಜಿ ಕಾರ್ಯದರ್ಶಿ ಸದಾನಂದ ಶಿಬಾರ್ಲ, ಮನೋಜ್ ನೀರಕಟ್ಟೆ, ದಯಾನಂದ ಅರಾಲುರವರು ಸಹಕರಿಸಿದರು.


ಆರ್ಥಿಕ ನೆರವು:
ಗ್ರಾಮದ ಮೂವರು ಬಡ ವಿದ್ಯಾರ್ಥಿಗಳ ವಾರ್ಷಿಕ ವಿದ್ಯಾಭ್ಯಾಸಕ್ಕೆ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.


ದಂತ ಚಿಕಿತ್ಸಾ ಶಿಬಿರ:
ಕೆ.ವಿ.ಜಿ.ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ದಂತ ಚಿಕಿತ್ಸಾ ಶಿಬಿರದಲ್ಲಿ ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತಕ ದಂತ ಜೋಡಣೆ ಸೇರಿದಂತೆ ಹಲ್ಲಿಗೆ ಸಂಬಂಧಿಸಿದ ಇತರೇ ಚಿಕಿತ್ಸೆ ನೀಡಲಾಯಿತು. ಗ್ರಾಮದ ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here