ಪುತ್ತಿಲ ಪರಿವಾರ ಪಾಣಾಜೆ ಗ್ರಾಮ ಸಮಿತಿಗೆ ಆಯ್ಕೆ

0

ಪಾಣಾಜೆ: ಪುತ್ತಿಲ ಪರಿವಾರ ಪಾಣಾಜೆ ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜೂ. 23 ರಂದು ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ‘ರಜತಾಮೃತ’ ಸಭಾಭವನದಲ್ಲಿ ನಡೆಯಿತು.


ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ರಮೇಶ್ ಭಟ್ ಬೊಳ್ಳುಕಲ್ಲು, ಕಾರ್ಯದರ್ಶಿಯಾಗಿ ಪುಷ್ಪರಾಜ ರೈ ಕೋಟೆಯವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ವಸಂತ ಭರಣ್ಯ ಮತ್ತು ಪ್ರೇಮ್ ರಾಜ್ ಆರ್ಲಪದವು ಆಯ್ಕೆಯಾದರು. ವಾರ್ಡ್ 170 ರ ಅಧ್ಯಕ್ಷರಾಗಿ ಸಂದೀಪ್ ವಾಣಿಯನ್ ಕಡಮ್ಮಾಜೆ, ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಕಡಮ್ಮಾಜೆ, ವಾರ್ಡ್ 171 ಅಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಕಾರ್ಯದರ್ಶಿಯಾಗಿ ರಕ್ಷಿತ್ ಬೊಳ್ಳಿಂಬಳ, ವಾರ್ಡ್ 172 ರ ಅಧ್ಯಕ್ಷರಾಗಿ ಶ್ರೀನಿವಾಸ ಕುಲಾಲ್ ಉಡ್ಡಂಗಳ, ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಆರ್ಲಪದವು, ವಾರ್ಡ್ 173 ರ ಅಧ್ಯಕ್ಷರಾಗಿ ಜಾನು ನಾಯ್ಕ್ ಭರಣ್ಯ, ಕಾರ್ಯದರ್ಶಿಯಾಗಿ ಗುರುರಾಜ್ ಭರಣ್ಯ ಆಯ್ಕೆಯಾದರು.

LEAVE A REPLY

Please enter your comment!
Please enter your name here