ದೇವಸ್ಥಾನದ ಒಳಗೆ ಅನ್ಯಮತೀಯರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಆಗ್ರಹಿಸಿ ಪುತ್ತಿಲ ಪರಿವಾರದಿಂದ ಮನವಿ

0

ಪುತ್ತೂರು: ದೇವಸ್ಥಾನದ ಒಳಗೆ ಅನ್ಯಮತೀಯರು ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಪುತ್ತಿಲ ಪರಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮನವಿ ಮಾಡಿದೆ.

ಜೂ.25 ಕ್ಕೆ ದೇವಸ್ಥಾನದ ಒಳಗೆ ಅನ್ಯಮತೀಯರು ಪ್ರವೇಶಿಸಿದ್ದು, ದೇವಸ್ಥಾನದ ಒಳಗೆ ಕ್ಯಾಮರಾ ಬಳಕೆ ಕಾನೂನು ವಿರೋಧವಾಗಿದ್ದರೂ ಭಾವಚಿತ್ರವನ್ನು ತೆಗೆಯುತ್ತಿರುವುದು ಭಕ್ತರ ಗಮನಕ್ಕೆ ಬಂದಿರುತ್ತದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಭಾವಚಿತ್ರದ ಜೊತೆಗೆ ವ್ಯಾಪಕ ಚರ್ಚೆಯಾಗುತ್ತಿದೆ. ಈ ವಿಷಯ ನಿಜವೇ ಆದಲ್ಲಿ ಪುತ್ತಿಲ ಪರಿವಾರ ಇದನ್ನು ತೀವ್ರವಾಗಿ ಖಂಡಿಸುತ್ತದೆ.

ಮುಂದಿನ ದಿನಗಳಲ್ಲಿ ಈ ರೀತಿಯಾದಲ್ಲಿ ಇದಕ್ಕೆ ದೇವಳದ ಆಡಳಿತ ಮಂಡಳಿಯೇ ನೇರ ಹೊಣೆಯಾಗಿರುತ್ತದೆ. ದೇವಸ್ಥಾನದಲ್ಲಿನ ಹಾಗೂ ಭಕ್ತರ ನಂಬಿಕೆಗೆ ಧಕ್ಕೆಯಾದಲ್ಲಿ ಪುತ್ತಿಲ ಪರಿವಾರದಿಂದ ತೀವ್ರ ಹೋರಾಟ ನಡೆಸಲಾಗುವುದು. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಅವರು ಮನವಿಯಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here