





ಪ್ರಾಮಾಣಿಕ ಸೇವೆಯಿಂದ ಸಹಕಾರಿ ಕ್ಷೇತ್ರಕ್ಕೆ ಬಲ: ಸುನೀಲ್ ಕುಮಾರ್ ದಡ್ಡು


ಉಪ್ಪಿನಂಗಡಿ: ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಅಗತ್ಯತೆಯನ್ನೂ ಪೂರೈಸುವ ದೃಷ್ಟಿಯಿಂದ ಸಹಕಾರಿ ಕ್ಷೇತ್ರ ಇನ್ನಷ್ಟು ಬಲವರ್ಧನೆಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಹಕಾರಿಗಳಾದ ನಾವೆಲ್ಲರೂ ಸಹಕಾರಿ ತತ್ವದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಇದು ಇನ್ನಷ್ಟು ಮಾದರಿ ಕ್ಷೇತ್ರವಾಗಿ ಬೆಳೆದು ನಿಲ್ಲುತ್ತದೆ ಎಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ತಿಳಿಸಿದರು.






72ನೇ ಸಹಕಾರಿ ಸಪ್ತಾಹದಂಗವಾಗಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಸಹಕಾರಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣಾಭಿವೃದ್ಧಿಗೆ ಹೆಬ್ಬಾಗಿಲಾಗಿ, ರೈತರ ಹಿತವನ್ನು ಬಯಸುತ್ತಾ ಸಹಕಾರಿ ಕ್ಷೇತ್ರವಿಂದ ವಿಶಾಲವಾಗಿ ಬೆಳೆದು ನಿಂತಿದೆ. ಇದನ್ನು ಇನ್ನಷ್ಟು ಮಾದರಿ ಕ್ಷೇತ್ರವಾಗಿ ಅಜರಾಮರವಾಗಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಎಸ್., ನಿರ್ದೇಶಕರಾದ ಪಿಜಕ್ಕಳ ವಸಂತ ಗೌಡ, ರಾಜೇಶ್, ರಾಘವ ನಾಯ್ಕ್, ಸುಂದರ ಕೆ., ಪ್ರಕಾಶ್ ರೈ ಬಿ., ಸಂಧ್ಯಾ, ಗೀತಾ, ಸಂಘದ ಸಿಬ್ಬಂದಿ, ಗ್ರಾಹಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ಸ್ವಾಗತಿಸಿದರು. ಉಪ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಎಚ್. ವಂದಿಸಿದರು.









