ಪುಚ್ಚೇರಿ: ವಿಶ್ವ ಮಾದಕ ವಿರೋಧಿ ದಿನಾಚರಣೆ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ನೆಲ್ಯಾಡಿ ವಲಯದ ವತಿಯಿಂದ ಪುಚ್ಚೇರಿ ಶಾಲೆಯಲ್ಲಿ ಶಾಲಾ ಪರಿಸರ ಕಾರ್ಯಕ್ರಮ ಮತ್ತು ವಿಶ್ವ ಮಾದಕ ವಿರೋಧಿ ದಿನಾಚರಣೆ ಜೂ.30ರಂದು ನಡೆಯಿತು.


ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಹಣ್ಣಿನ ಮತ್ತು ಹೂವಿನ ಗಿಡ ನಾಟಿಮಾಡಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ವಹಿಸಿದ್ದರು. ಪುಚ್ಚೆರಿ ಶಾಲೆಯ ಮುಖ್ಯಗುರು ಪದ್ಮನಾಭ ಪಿ., ದೀಪ ಬೆಳಗಿಸಿ ಉದ್ಘಾಟಿಸಿದರು. ಮಾದೇರಿ ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿಯನ್, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಶ್ರೀಲತಾ, ಜಯಂತಿ, ವಲಯ ಮೇಲ್ವಿಚಾರಕ ವಿಜೇಶ್, ಜ್ಞಾನ ವಿಕಾಸ ಸಂಯೋಜಕಿ ಯಶ್ವಿನಿ ಮತ್ತು ಸದಸ್ಯರು, ಶಿಕ್ಷಕವೃಂದದವರು, ಶಾಲಾ ಮಕ್ಕಳು, ಸೇವಾಪ್ರತಿನಿಧಿಗಳಾದ ಕವಿತಾ, ಅನುಷಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here