ಪುತ್ತೂರು:ಆರ್ಥೋಪೆಡಿಕ್ ಕ್ಷೇತ್ರದಲ್ಲಿ ಮಾಡಿದ ಗಮನಾರ್ಹ ಕೆಲಸಕ್ಕಾಗಿ ಪುತ್ತೂರು ಸರಕಾರಿ ಆಸ್ಪತ್ರೆಯ ಪ್ರಮುಖ ಮೂಳೆ ಶಸಚಿಕಿತ್ಸಕ ಡಾ.ಅಜೇಯ್ ಅವರಿಗೆ ರಾಜ್ಯ ಸರಕಾರ ‘ಶ್ರೇಷ್ಟ ವೈದ್ಯ’ ಪ್ರಶಸ್ತಿಯನ್ನು ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ರಾಜ್ಯ ಸರಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಜು.1ರಂದು ಬೆಂಗಳೂರುನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವೈದ್ಯರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಿದರು.
ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಡಾ. ಸದಾನಂದ ಪೂಂಜಾ ಅವರಿಗೂ ಇದೇ ಸಂದರ್ಭ ‘ಶ್ರೇಷ್ಟ ವೈದ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.ಡಾ.ಅಜೇಯ್ ಅವರ ಜೊತೆ ಪುತ್ತೂರು ತಾಲೂಕು ಆರೋಗ್ಯಾಽಕಾರಿ ಡಾ.ದೀಪಕ್ ರೈ ಅವರು ಉಪಸ್ಥಿತರಿದ್ದರು.